ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿ ನಾಪತ್ತೆ: ಕಂಗಾಲಾದ ಕುಟುಂಬ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಾಸರಹಳ್ಳಿಯ 13 ವರ್ಷದ ಬಾಲಕಿ ನಂದಿತಾ ಕಾಣೆಯಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ.

First Published Nov 18, 2022, 2:14 PM IST | Last Updated Nov 18, 2022, 2:14 PM IST

ಹಾಸನ :ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಂದಿತಾ ಓದುತ್ತಿದ್ದಳು. ಬಾಲಕಿಯನ್ನು ಅಲ್ಲಿಯೇ ಹಾಸ್ಟೆಲ್'ಗೆ ಸೇರಿಸಲಾಗಿತ್ತು‌. ಆದರೆ ಒಂದು ವಾರದಿಂದ ಬಾಲಕಿ ನಾಪತ್ತೆ ಆಗಿದ್ದಾಳೆ. ಬಸ್ ಹತ್ತಿ ಹೋದ ಬಾಲಕಿ ಇದುವರೆಗೂ ಪತ್ತೆಯಿಲ್ಲ. ಒಂದು ವಾರದಿಂದ ಮಗಳ ಮುಖ ನೋಡದೇ ಪಾಲಕರು ದಿಕ್ಕು ತೋಚದಂತಾಗಿ ಕಣ್ಣೀರಿಡುತ್ತಿದ್ದಾರೆ. ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದ್ದು, ಹುಡುಕಾಟ ನಡೆದಿದೆ. ಪ್ರೀತಿಯಿಂದ ಸಾಕಿದ್ದ ಮಗಳು, ಓದು ಹಾಗೂ ಬರಹದಲ್ಲಿ ಚೂಟಿ ಆಗಿದ್ದಳು. ಆದ್ರೆ ಇದ್ದಕ್ಕಿಂದ ಕಳೆದ ಒಂದು ವಾರದಿಂದ ಮಿಸ್ಸಿಂಗ್ ಆಗಿದ್ದು ಎಲ್ಲೂ ಪತ್ತೆ ಆಗ್ತಿಲ್ಲ. ಮಗಳೇ ಎಲ್ಲಿದ್ರೂ ವಾಪಾಸ್ ಮನೆಗೆ ಬಂದು ಬಿಡು ಎನ್ನುತ್ತಿದೆ ಇಡೀ ಕುಟುಂಬ.

ಅಕ್ರಮವಾಗಿ ಪಾಸ್ ಪೋರ್ಟ್ ಮಾಡಿಸಿದ್ದ ನೇಪಾಳ ಪ್ರಜೆ ಬಂಧನ