Asianet Suvarna News Asianet Suvarna News

ಗದಗ ಶಿವಾನಂದ ಮಠದದಲ್ಲಿ ಆಂತರಿಕ ಬಿಕ್ಕಟ್ಟು ಸ್ಫೋಟ..!

ಗದಗ ಶಿವಾನಂದ ಮಠದ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದೆ. ಕಿರಿ ಹಾಗೂ ಹಿರಿಯ ಶ್ರೀಗಳ ಮುನಿಸು ಇದೀಗ ಹೊರಬಿದ್ದಿದೆ.

ಗದಗ: ಅನುಮತಿ ಇಲ್ಲದೇ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿಗಳ ಕೋಣೆ ಪ್ರವೇಶಿಸಿದ್ದಕ್ಕೆ ಮಠದ ಆವರಣ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು. ಮಠದ ಅಂಗಳದಲ್ಲಿ ಕಾರಿನಲ್ಲೇ ಕುಳಿತಿದ್ರು ಕಿರಿಯ ಶ್ರೀಗಳು. ಇನ್ನು ಮಠದ ಹಿರಿಯ ಶ್ರೀಗಳಾದ ಅಭಿನವ ಶಿವಾನಂದ ಸ್ವಾಮಿಗಳು ಭಕ್ತರ ಜೊತೆಗೆ ಸಭೆ ನಡೆಸಿ, ನಂತರ ಮಾತನಾಡಿದರು. 28/11/22 ರಂದು ಉತ್ತರಾಧಿಕಾರಿ ಪದಚ್ಯುತಗೊಳಿಸಲಾಗಿದೆ. ಕಿರಿಯ ಶ್ರೀಗಳು ಮಠದ ಪರಂಪರೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಸನಾತನ ಸಂಸ್ಕೃತಿ, ಸಂಪ್ರದಾಯ, ಪೂಜೆ, ಪುನಸ್ಕಾರದ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಮನಸ್ಸಿಗೆ ನೋವಾಗಿ ಹೀಗಾಗಿ ಉತ್ತಾರಿಧಿಕಾರಿಯಿಂದ ತೆಗೆದಿದ್ದೇವೆ‌ ಎಂದು ಅಸಮಾಧಾನ ತೋಡಿಕೊಂಡರು.