Gadag : ಕರೊನಾ 3 ನೇ ಅಲೆಯ ಎಫೆಕ್ಟ್, 6 ತಿಂಗಳಲ್ಲಿ 363 ಗರ್ಭಪಾತ, ಜಿಲ್ಲೆಯಲ್ಲಿ ಹೆಚ್ಚಾದ ಆತಂಕ!
- ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಹೆಚ್ಚಾದ ಗರ್ಭಪಾತ ಪ್ರಕರಣ!
- ಕರೊನಾ ಮೂರನೇಯ ಅಲೆಯ ಎಫೆಕ್ಟ್, ಹೆಚ್ಚಾದ ಗರ್ಭಪಾತ!
- ಆರು ತಿಂಗಳಲ್ಲಿ 363 ಗರ್ಭಪಾತ, ಜಿಲ್ಲೆಯಲ್ಲಿ ಹೆಚ್ಚಾದ ಆತಂಕ!
ಗದಗ (ನ. 19): ಹೆಮ್ಮಾರಿ ಕೊರೋನಾ ಮಾಡಿದ ಅವಾಂತರ ಸಾಕಷ್ಟು. ಈವಾಗ ಕೊರೋನಾ ಕಡಿಮೆಯಾದರು ಮತ್ತೊಂದು ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಹೌದು ಕೊರೋನಾ ಮೂರನೇಯ (Corona 3 rd Wave) ಅಲೆ ಬರುತ್ತೆ.. ಮತ್ತೆ ಲಾಕ್ ಡೌನ್ ಆಗುತ್ತೇ ಅಂತಾ ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ಬಾರದೆ ಮಹಾ ಎಡವಟ್ಟು ಮಾಡಿಕೊಂಡಿದ್ದಾರಂತೆ. ಇದು ವೈದ್ಯರಿಗೂ ಯಕ್ಷಪ್ರಶ್ನೆಯಾಗಿದೆ.
Chitradurga: ಬೆಳೆ ಬಿತ್ತನೆಗೆ ಖರ್ಚು ಮಾಡೋದು 70 ಸಾವಿರ, ವಿಮೆ ಬರೋದು 7 ಸಾವಿರ, ರೈತರ ಆಕ್ರೋಶ
ಗದಗ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 363 ಗರ್ಭಪಾತ (Miscarriage) ಪ್ರಕರಣಗಳು ಬೆಳಕಿಗೆ ಬಂದಿವೆ. ಗದಗ- ಬೆಟಗೇರಿ ಅವಳಿ ನಗರ ಸೇರಿದಂತೆ ಗದಗ ತಾಲೂಕಿನಲ್ಲಿ 137 ಗರ್ಭಪಾತ, ಶಿರಹಟ್ಟಿ ತಾಲೂಕಿನಲ್ಲಿ 107, ರೋಣ ತಾಲೂಕಿನ 20, ನರಗುಂದ ತಾಲೂಕಿನ 44, ಮುಂಡರಗಿ ತಾಲೂಕಿನ 55 ಗರ್ಭಪಾತ ಪ್ರಕರಣಗಳು ಬೆಳಕಿವೆ ಬಂದಿವೆ. ಗರ್ಭಪಾತವಾಗಲು ಹತ್ತಾರು ಕಾರಣಗಳು ಇರುತ್ತವೆ. ತಾಯಿ ಅನಾರೋಗ್ಯ, ಸರಿಯಾದ ಪ್ರಮಾಣದಲ್ಲಿ ಮಗು ಬೆಳವಣಿಗೆಯಾಗದ ಹಿನ್ನಲೆ, ಸೇರಿದಂತೆ ಹತ್ತಾರು ಕಾರಣಗಳಿಂದ ಗರ್ಭಪಾತ ಆಗುತ್ತವೆ. ಆರು ತಿಂಗಳಲ್ಲಿ ಸ್ಪಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿವೆ ಅಂತಾರೆ ಗದಗ ಡಿಎಚ್ಓ