ಅಗ್ನಿಪಥ ಯೋಜನೆಗೆ ಕೋಲಾರದಲ್ಲಿ ಉಚಿತ ತರಬೇತಿ, ಸೇನಾಕಾಂಕ್ಷಿಗಳಿಂದ ಭರ್ಜರಿ ಪ್ರತಿಕ್ರಿಯೆ
- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಗೆ ಕೋಲಾರದಲ್ಲಿ ತರಬೇತಿ
- 182 ಯುವಕರಿಗೆ ಉಚಿತ ತರಬೇತಿ; ಸೇನಾಕಾಂಕ್ಷಿಗಳಿಂದ ಭರ್ಜರಿ ಪ್ರತಿಕ್ರಿಯೆ
- ಸೇನೆಗೆ ಸೇರುವ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಹಾಗೂ ಪಠ್ಯ ತರಬೇತಿ
ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ದೇಶಾದ್ಯಂತ ಅದೆಷ್ಟೇ ವಿವಾದ ಸೃಷ್ಟಿಸಿದ್ರು, ಸೇನಾಕಾಂಕ್ಷಿಗಳ ರೆಸ್ಪಾನ್ಸ್ ಮಾತ್ರ ಭರ್ಜರಿಯಾಗಿದೆ. ಹಾಗಾಗಿ ಸೇನೆಗೆ ಸೇರ ಬಯಸುವ ಅಗ್ನಿವೀರರನ್ನ ಚಿನ್ನದ ನಾಡು ಕೋಲಾರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆ ಉಚಿತವಾಗಿ ಟ್ರೈನಿಂಗ್ ನೀಡಿ ತಯಾರು ಮಾಡ್ತಿದೆ.
ಕೋಲಾರದ ಸ್ಪೋರ್ಟ್ಸ್ ಕ್ಲಬ್ ಮೂಲಕ ಅಗ್ನಿ ವೀರರಾಗಿ ತಯಾರಾಗಲು ಬಯಸುವ ಯುವಕ, ಯುವತಿಯರಿಗೆ ಉಚಿತವಾಗಿ ದೈಹಿಕ ತರಬೇತಿ ನೀಡ್ತಿದೆ. ಮಾಜಿ ಸೈನಿಕರಾದ ಕೃಷ್ಣಮೂರ್ತಿ,ಬ್ಲಾಕ್ ಕಮಾಂಡೋ ಟ್ರೈನಿಂಗ್ ಪಡೆದಿರುವ ಸುರೇಶ್ ಅವರ ಮಾರ್ಗದರ್ಶನದಲ್ಲಿ 182 ಅಭ್ಯರ್ಥಿಗಳು ತರಬೇತಿ ಪಡೆದುಕೊಳ್ತಿದ್ದಾರೆ. ಅತ್ಯಂತ ಜೋಶ್‌ನಿಂದ ತರಬೇತಿ ಪಡೆಯುತ್ತಿರುವ ಅಗ್ನಿ ವೀರರು ಮುಂದಿನ ತಿಂಗಳು ಹಾಸನದಲ್ಲಿ ನಡೆಯುವ ಆರ್ಮಿ ಸೆಲೆಕ್ಷನ್ ನಲ್ಲಿ ಭಾಗವಹಿಸಲಿದ್ದಾರೆ.
ನೌಕಾಪಡೆಯಲ್ಲಿ 2800 ಅಗ್ನಿವೀರ ಹುದ್ದೆಗೆ ಅರ್ಜಿ ಆಹ್ವಾನ
ಇನ್ನು ಕೋಲಾರ ಸ್ಪೋರ್ಟ್ಸ್ ಕ್ಲಬ್ ಕಳೆದ 25 ವರ್ಷಗಳಿಂದಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇಂತಹ ಕ್ರೀಡಾ ಚಟುವಟಿಕೆ ನಡೆಸಿಕೊಂಡು ಬಂದಿದೆ. ಕೋವಿಡ್ ನಿಂದ ತರಬೇತಿ ನಿಲ್ಲಿಸಲಾಗಿತ್ತು,ಇದೀಗ ಅಗ್ನಿ ಪಥ್ ಮೂಲಕ ಮತ್ತೆ ತರಬೇತಿ ಶುರುವಾಗಿದೆ. ಇನ್ನು ರಾಜ್ಯದ ಹಲವು ಜಿಲ್ಲೆಗಳಿಂದ ಅಗ್ನಿ ವೀರರಾಗಲು ಆಸೆ ಪಡ್ತಿದ್ದಾರೆ. ಆದ್ರೆ ಸೌಲಭ್ಯಗಳ ಕೊರತೆಯಿಂದ ಕೋಲಾರ ಜಿಲ್ಲೆಯವರಿಗೆ ಮಾತ್ರ ತರಬೇತಿ ನೀಡ್ತಿದ್ದಾರೆ. ಸೈನ್ಯಕ್ಕೆ ಬೇಕಾಗುವ ದೈಹಿಕ ತರಬೇತಿ ಹಾಗೂ ಪಠ್ಯ ತರಬೇತಿ ಸಹ ಉಚಿತವಾಗಿ ನೀಡಲಾಗ್ತಿದೆ.ಇದರ ಜೊತೆ ತರಬೇತಿ ಪಡೆಯುತ್ತಿರುವ ಯುವಕ ಯುವತಿಯರಿಗೆ ಉಚಿತವಾಗಿ ಮೊಟ್ಟೆ, ಹಾಲು,ಬಾಳೆಹಣ್ಣು ಹಾಗೂ ಮೊಳಕೆಕಾಳು ಸಹ ನೀಡ್ತಿರೋದು ವಿಶೇಷ.
IAF Recruitment: ಅಗ್ನಿವೀರರಾಗಲು ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ
ಒಟ್ಟಾರೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಗ್ನಿ ಪಥ್ ಯೋಜನೆ ಹಲವೂ ವಿವಾದಗಳ ನಡುವೆಯೂ ಸದ್ದಿಲ್ಲದೆ ಉತ್ತಮ ಸ್ಪಂದನೆ ಗಳಿಸುತ್ತಿದೆ. ಸೈನ್ಯಕ್ಕೆ ಸೇರಲು ಕೋಲಾರ ಜಿಲ್ಲೆಯ ನೂರಾರು ಜನರು ಉತ್ಸುಕರಾಗಿದ್ದು,ಅಗ್ನಿ ವೀರರಾಗಲು ತರಬೇತಿ ಪಡೆದು ಸಿದ್ದರಾಗ್ತಿದ್ದಾರೆ ಅನ್ನೋದು ವಿಶೇಷ.