ಮಲ್ಲಯ್ಯನ ಕಂಬಿ ಹೊತ್ತಿ 700 ಕಿ.ಮೀ ನಡೆವ ಭಕ್ತರಿಗೆ ದಾರಿಯಲ್ಲಿ ಉಚಿತ ಮೆಡಿಕಲ್ ಸೇವೆ
ಯುಗಾದಿಗೆ ಆಂಧ್ರ ಪ್ರದೇಶದ ಶ್ರೀಶೈಲ ಸುಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಲ್ಲಿಕಾರ್ಜನ ದೇವರ ಜಾತ್ರೆ ನಡೆಯುತ್ತೆ. ಈ ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ನಾ ಮುಂದು ತಾ ಮುಂದು ಅಂತ ಪಾದಯಾತ್ರೆ ಮಾಡಿ ಮಲ್ಲಿಕಾರ್ಜುನ ದೇವರಿಗೆ ಹರಕೆ ತೀರಿಸುತ್ತಾರೆ.
ಹೋಳಿ ಹುಣ್ಣಿಮೆ ಮುಗಿದ ಬಳಿಕ ಶ್ರೀಶೈಲ ಪಾದಯಾತ್ರೆ ಆರಂಭವಾಗುತ್ತೆ, ಭಕ್ತರು ಮಹಾರಾಷ್ಟದ ಸೋಲಾಪುರದಿಂದ ಆರಂಭಗೊಳ್ಳುವ ಪಾದಯಾತ್ರೆ ಶ್ರೀಶೈಲದವರೆಗೂ ನಡೆಯುತ್ತೆ, ಲಕ್ಷಾಂತರ ಭಕ್ತರು ರಸ್ತೆ ಉದ್ದಕ್ಕೂ ನಡೆದುಕೊಂಡು ಹೋಗುವುದನ್ನ ನೋಡುವುದೇ ಒಂದು ಹಬ್ಬ. ಇಂತಹ ಪಾದಯಾತ್ರಿಗಳಿಗಾಗಿ ದಾರಿ ಉದ್ದಕ್ಕೂ ಹತ್ತಾರು ಸೇವೆಗಳು ಸಿಗುತ್ತವೆ.
ಯುಗಾದಿಗೆ ಆಂಧ್ರ ಪ್ರದೇಶದ ಶ್ರೀಶೈಲ ಸುಕ್ಷೇತ್ರದಲ್ಲಿ ಅದ್ಧೂರಿಯಾಗಿ ಮಲ್ಲಿಕಾರ್ಜನ ದೇವರ ಜಾತ್ರೆ ನಡೆಯುತ್ತೆ. ಈ ಜಾತ್ರೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ನಾ ಮುಂದು ತಾ ಮುಂದು ಅಂತ ಪಾದಯಾತ್ರೆ ಮಾಡಿ ಮಲ್ಲಿಕಾರ್ಜುನ ದೇವರಿಗೆ ಹರಕೆ ತೀರಿಸುತ್ತಾರೆ. ಮಹಾರಾಷ್ರದ ಸೋಲಾಪುರದಿಂದ ಆರಂಭಗೊಂಡ ಭಕ್ತರ ಪಾದಯಾತ್ರೆ, ಬೆಳಗಾವಿ,ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸಾವಿರಾರು ಭಕ್ತರು ಮಲ್ಲಯ್ಯನ ಕಂಬಿ ಹೊತ್ತು ರಾಯಚೂರು ಮಾರ್ಗವಾಗಿ ಶ್ರೀಶೈಲಕ್ಕೆ ಹೋಗುತ್ತಾರೆ.
ಪಾದಯಾತ್ರಿಗಳ ಅನುಕೂಲಕ್ಕಾಗಿ ದಾನಿಗಳು ಅನ್ನದಾಸೋಹ, ಫಲಹಾರ ವಿತರಣೆ ಮತ್ತು ವಿಶ್ರಾಂತಿ ಕೋಣೆಗಳು ಸೇರಿದಂತೆ ನಾನಾ ಸೌಕರ್ಯಗಳು ವ್ಯವಸ್ಥೆ ಮಾಡುತ್ತಾರೆ. ಹೀಗಾಗಿ ಭಕ್ತರು ಮಲ್ಲಯ್ಯನ ನಂಬಿ ಪಾದಯಾತ್ರೆ ಮಾಡಿದ್ರೆ ಎಲ್ಲವೂ ಸಿಗುತ್ತೆ ಎಂಬ ನಂಬಿಕೆಯಲ್ಲಿ ನೂರಾರು ಜನರು ಗುಂಪು-ಗುಂಪಾಗಿ ಪಾದಯಾತ್ರೆ ಮಾಡುತ್ತಾರೆ.
ಇನ್ನೂ ಶ್ರೀಶೈಲಕ್ಕೆ ನೂರಾರು ಕಿ.ಮೀ. ಪಾದಯಾತ್ರೆ ಮಾಡುವ ಭಕ್ತರ ಕಾಲುಗಳಿಗೆ ಗಾಯಗಳು ಆಗುತ್ತವೆ. ಆದ್ರೂ ನೋವಿನಲ್ಲಿಯೇ ಭಕ್ತರು ಮಲ್ಲಯ್ಯನ ಜಪಿಸುತ್ತಾ ಪಾದಯಾತ್ರೆ ಮಾಡುತ್ತಿರುತ್ತಾರೆ. ಇದನ್ನ ಗಮನಿಸಿದ ವೀರಶೈವಾ ರುದ್ರಸೇನಾ ಕಾರ್ಯಕರ್ತರು ಕಳೆದ 8 ವರ್ಷಗಳಿಂದ ಪಾದಯಾತ್ರಿಗಳ ಸೇವೆಗೆ ಮುಂದಾಗಿದ್ದಾರೆ. ಪಾದಯಾತ್ರಿಗಳು ಗಾಯಗೊಂಡರೇ ಅವರಿಗೆ ಪ್ರಥಮ ಚಿಕಿತ್ಸೆ ನೀಡುವುದು, ಮಾತ್ರೆ, ಇಂಜೆಕ್ಷನ್ ನೀಡುವುದು ಹಾಗೂ ಅಪಘಾತವಾಗಿ ಗಾಯಗೊಂಡರೇ ಅಂತವರಿಗೆ ಆ್ಯಂಬುಲೇನ್ಸ್ ಸೇವೆ ಒದಗಿಸುವುದು. ಜೊತೆಗೆ ಪಾದಯಾತ್ರೆ ವೇಳೆ ಯಾರಾದರೂ ಮೃತಪಟ್ಟರೇ ಅಂತಹವರ ಮೃತದೇಹ ಅವರ ಸ್ವಗ್ರಾಮಕ್ಕೆ ತಲುಪಿಸಿ ಅಂತ್ಯಕ್ರಿಯೆ ಸಹ ನೇರವೇರಿಸಿ ಬರಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಶ್ರೀಶೈಲ ಪಾದಯಾತ್ರೆ ಹೊರಟ್ಟ ಭಕ್ತರ ಅನುಕೂಲಕ್ಕಾಗಿ ನೂರಾರು ದಾನಿಗಳು ಅನ್ನದಾನ ಜೊತೆಗೆ ಮೆಡಿಕಲ್ ಸೇವೆಯೂ ಲಭ್ಯವಿದ್ದು, ಭಕ್ತರು ಗಾಯಗೊಂಡರೂ ಚಿಕಿತ್ಸೆ ಪಡೆದು ಮತ್ತೆ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ.