ವರ್ತೂರ್‌ ಪ್ರಕಾಶ್‌ ಕಿಡ್ನಾಪ್‌ ಕಹಾನಿ ಸುತ್ತ ಅನುಮಾನ..!

ನ. 28 ರಂದು ಬಿಡುಗಡೆಯಾದ್ರೂ ಪೊಲೀಸರಿಗೆ ದೂರು ನೀಡದ ವರ್ತೂರ್‌ ಪ್ರಕಾಶ್‌| ಹಲವು ಅನುಮಾನ ಮೂಡಿಸುತ್ತಿರುವ ಮಾಜಿ ಸಚಿವ ವರ್ತೂರ್‌ ಪ್ರಕಾಶ್‌ ಕಿಡ್ನಾಪ್‌ ಕಹಾನಿ|  

First Published Dec 2, 2020, 3:36 PM IST | Last Updated Dec 2, 2020, 3:36 PM IST

ಬೆಂಗಳೂರು(ಡಿ.02): ಮಾಜಿ ಸಚಿವ ವರ್ತೂರ್‌ ಪ್ರಕಾಶ್‌ ಕಿಡ್ನಾಪ್‌ ಕಹಾನಿ ಹಲವು ಅನುಮಾನಗಳು ಮೂಡುತ್ತಿವೆ. ಪ್ರಮುಖವಾಗಿ ಅವರು ಹೇಳುತ್ತಿರುವಂತ ವಿಚಾರ ಹಾಗೂ ಕೇಳಿ ಬಂದಂತ ಸುದ್ದಿ. ಇವೆರಡಕ್ಕೂ ತಾಳೆ ಹಾಕಿ ಈ ಪ್ರಕರಣದ ಬಗ್ಗೆ ತನಿಖೆಯನ್ನ ನಡೆಸಲಾಗುತ್ತಿದೆ. 

ನ್ಯೂ ಇಯರ್ ಸೆಲಬ್ರೇಶನ್‌ಗೆ ಬ್ರೇಕ್; ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂ ಜಾರಿ..?

ನ. 28 ರಂದು ಬಿಡುಗಡೆಯಾದ್ರೂ ವರ್ತೂರ್‌ ಪ್ರಕಾಶ್‌ ಪೊಲೀಸರಿಗೆ ಯಾಕೆ ದೂರು ನೀಡಿಲ್ಲ ಎಂಬುದೇ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಸ್ವತಃ ವರ್ತೂರ್‌ ಪ್ರಕಾಶ್‌ ಅವರು ಏಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ.