ಆನೇಕಲ್‌: ರಾಜಕಾರಣಿಗಳ ಪ್ರತಿಷ್ಠೆ, ಉದ್ಘಾಟನೆಯಾಗದೇ ಉಳಿದ ಆರೋಗ್ಯ ಉಪಕೇಂದ್ರ!

ಆನೇಕಲ್ ತಾಲೂಕಿನ ಬೊಮ್ಮಸಂದ್ರ ಅತೀ ಹೆಚ್ಚು ಬಡಜನ ಹಾಗೂ ಹೊರರಾಜ್ಯದ ಕೂಲಿ ಕಾರ್ಮಿಕರು ಇರುವ ಪ್ರದೇಶ. ಈ ಗ್ರಾಮದಲ್ಲಿ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು ಆರೋಗ್ಯದಲ್ಲಿ ಏರುಪಾರದರೆ ಸರ್ಕಾರಿ ಆಸ್ಪತ್ರೆಗೆ 6 ಕಿಮೀ ದೂರ ಹೋಗಬೇಕು. 

First Published Jul 7, 2022, 11:21 AM IST | Last Updated Jul 7, 2022, 11:21 AM IST

ಬೆಂಗಳೂರು (ಜು. 07): ಆನೇಕಲ್ ತಾಲೂಕಿನ ಬೊಮ್ಮಸಂದ್ರ ಅತೀ ಹೆಚ್ಚು ಬಡಜನ ಹಾಗೂ ಹೊರರಾಜ್ಯದ ಕೂಲಿ ಕಾರ್ಮಿಕರು ಇರುವ ಪ್ರದೇಶ. ಈ ಗ್ರಾಮದಲ್ಲಿ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು ಆರೋಗ್ಯದಲ್ಲಿ ಏರುಪಾರದರೆ ಸರ್ಕಾರಿ ಆಸ್ಪತ್ರೆಗೆ 6 ಕಿಮೀ ದೂರ ಹೋಗಬೇಕು. ಇದಕ್ಕೊಂದು ಪರಿಹಾರ ಸಿಗಬೇಕೆಂದು ಗೌರಮ್ಮ ತಿಮ್ಮಾರೆಡ್ಡಿ ಫೌಂಢೇಶನ್‌ನ ನಾಗರಾಜ್ ರೆಡ್ಡಿಯವರು ಸಿಎಸ್‌ಆರ್ ಫಂಡ್‌ನಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರ ನಿರ್ಮಾಣ ಮಾಡದ್ದಾರೆ. ಕೇಂದ್ರ ನಿರ್ಮಾಣ ಆಗಿ ೩ ತಿಂಗಳು ಖಲೆದರೂ ಜನಪ್ರತಿನಿಧಿಗಳ ಪ್ರತಿಷ್ಠೆಯಿಂದ ಇನ್ನೂ ಉದ್ಘಾಟನೆಯಾಗಿಲ್ಲ. ಇದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.