Asianet Suvarna News Asianet Suvarna News

ಡಿ ಗ್ರೂಪ್ ಬಡಾವಣೆ ಅಂದ್ರೆ ಕಾಲಿಡಲ್ವಾ ಶಾಸಕರು? ಕಿತ್ತೋದ್ ರಸ್ತೆ, ಗುಂಡಿ ಗಂಡಾತರ, ನೀರಿಗೆ ನರಳಾಟ!

ನಮ್ಮ ಬೆಂಗಳೂರನ್ನು ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಮೆಟ್ರೋ ಸಿಟಿ, ಐಟಿ-ಬಿಟಿ ಸಿಟಿ ಅಂತಾರೆ...ಹೀಗೆ ಹತ್ತಾರು ಬಿರುದು ಹೊಂದಿರುವ ಬೆಂಗಳೂರಿನ ಈ ಬಡಾವಣೆ ನೋಡಿದ್ರೆ ದಂಗಾಗಿ ಬಿಡ್ತೀರಿ. 
 

ರಾಜ್ಯದ ರಾಜಧಾನಿ ಬೆಂಗಳೂರೇ ಆಗಿದ್ರು, ಈ ಬಡಾವಣೆಯ ಜನರು ಮಾತ್ರ  ಮೂಲಸೌಕರ್ಯಗಳಿಗಾಗಿ ಇಂದಿಗೂ  ಅಂಗಲಾಚುತ್ತಿದ್ದಾರೆ. ರಸ್ತೆಗಳೇ ಕಾಣದಷ್ಟು ದೊಡ್ಡ ಗುಂಡಿಗಳು, ನೀರಿಗಾಗಿ ಪರದಾಟ, ಹಾವುಗಳ ಕಾಟದ ನಡುವೆ ಸಂಜೆಯಾದ್ರೆ ಕತ್ತಲ ಕೂಪದಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಓಡಾಡುವ ಪರಿಸ್ಥಿತಿ ಇಲ್ಲಿದೆ. ಈ ಬಡಾವಣೆ ವಿಚಾರವಾಗಿ ಶಾಸಕರದ್ದು ಮಲತಾಯಿ ಧೋರಣೆ, ಬಿಬಿಎಂಪಿಯದ್ದು ಜಾಣ ಕುರುಡು. ಇದು, ಬೆಂಗಳೂರಿನ‌ ಯಶವಂತಪುರ ಕ್ಷೇತ್ರದ, ದೊಡ್ಡಬಿದರಕಲ್ಲು ವಾರ್ಡ್‌ಗೆ ಸೇರಿದ ಡಿ ಗ್ರೂಪ್ ಬಡಾವಣೆ, ಇದು ಜನರ ಕಣ್ಣೀರಿನ ಕಥೆ. ಸಿಲಿಕಾನ್ ಸಿಟಿಯಲ್ಲೇ ಇದ್ದು ಮೂಲಸೌಕರ್ಯಗಳಾದ ರಸ್ತೆ , ನೀರು, ವಿದ್ಯುತ್‌ಗಾಗಿ ಕಣ್ಣೀರಿಡುತ್ತಿರುವ ಈ ಜನರಿಗೆ ಬೇಕಾಗಿರೋದು ‘ಬ್ರ್ಯಾಂಡ್ ಬೆಂಗಳೂರು’ ಅಲ್ಲ ಬದಲಿಗೆ ಬೆಂಗಳೂರಿನಲ್ಲೊಂದು ಸೇಫೆಸ್ಟ್  ಬದುಕು.

ದೊಡ್ಡಬಿದರಕಲ್ಲು ನಗರ 2008ರಲ್ಲೇ ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ರೂ. ಇಲ್ಲಿನ ರಸ್ತೆಗಳು ಟಾರ್ ಕಂಡಿಲ್ಲ, ಇರೋ ಮಣ್ಣಿನ ರಸ್ತೆಯಲ್ಲಿಯೂ ರಸ್ತೆ ಗುರುತೇ ಸಿಗದಷ್ಟು  ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಈ ಗುಂಡಿಗಳಲ್ಲಿ ಬಿದ್ದು  ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದವರಿಗೆ  ಲೆಕ್ಕವೇ ಇಲ್ಲ. 
ಇಲ್ಲಿನ ಜನರಿಗೆ ಕುಡಿಯಲು ಟ್ಯಾಂಕರ್ ನೀರೇ ಗತಿ, ವಿದ್ಯುತ್ ಕಂಬಗಳು ಇಲ್ಲದೇ ಇರೋ ಕಾರಣ, ಹಾವಿನ ಕಾಟದಲ್ಲಿ ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿಯೂ ಇದೆ, ಸಂಜೆ ನಂತರ ಇಲ್ಲಿನ  ಜೀವನ  ಕಾಡಿನ ಜೀವನವನ್ನೇ ನೆನಪಿಸಿ ಜೀವವನ್ನೇ ನಡುಗಿಸಿಬಿಡುತ್ತೆ ಎಂದು ಸ್ಥಳೀಯರು ಗೋಳಾಡುತ್ತಿದ್ದಾರೆ.

ಇಲ್ಲಿ ಸಮಸ್ಯೆಗೆ ಮೂಲ ಕಾರಣ ಇಲ್ಲಿನ ರಾಜಕೀಯ ಹಗ್ಗ-ಜಗ್ಗಾಟ, ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕ ಸೋಮಶೇಖರ್ ಅವರಿಗೆ  ಚೆನ್ನಾಗಿಯೇ ತಿಳಿದಿದೆ.ಆದ್ರೇ, ನಾಲ್ಕು ಬಾರಿ ಈ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸೋಮಶೇಖರ್ ಅವರ ಒಲವು ಈ ಜನರ ಮೇಲೆ ಇಲ್ಲ. ಈ ಭಾಗದಲ್ಲಿ ಶಾಸಕ ಸೋಮಶೇಖರ್ ಅವರಿಗೆ ವೋಟ್ ಬೀಳೋದಿಲ್ವಂತೆ. ಆ ಕಾರಣಕ್ಕೆ ನಮ್ಮ ಬಡಾವಣೆ ಬಗ್ಗೆ ಮಲತಾಯಿ ಧೋರಣೆ ಶಾಸಕರಿಗಿದೆ ಅನ್ನೋದು ಸ್ಥಳೀಯರ ಆರೋಪ.

ಇದನ್ನೂ ವೀಕ್ಷಿಸಿ:  ಬಿಗ್‌ 3 ವರದಿಗೆ ಸರ್ಕಾರ ಅಲರ್ಟ್.. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಿಕ್ತು ಪರಿಹಾರ !

Video Top Stories