ಡಿಕೆಶಿಗೆ ಶುರುವಾಯ್ತಾ ಮತ್ತೊಂದು ಸಂಕಷ್ಟ? ಲೋಕಾಯುಕ್ತ ಪೊಲೀಸರಿಂದ ತನಿಖೆಗೆ ಆದೇಶ!
ಕ್ಯಾಬಿನೆಟ್ ಆದೇಶದಂತೆ ರಾಜ್ಯದ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶ
ED ಬರೆದಿದ್ದ ಪತ್ರ ಆಧರಿಸಿ ಆದೇಶ ಮಾಡಿರುವ ರಾಜ್ಯ ಗೃಹ ಇಲಾಖೆ
ಸಿಬಿಐನಿಂದ ಮಾಹಿತಿ ಪಡೆದು ತನಿಖೆ ಮುಂದುವರೆಸಲಿರುವ ಪೊಲೀಸರು
ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಶುರುವಾದಂತೆ ಕಾಣುತ್ತಿದ್ದು, ಸಿಬಿಐ(CBI) ತನಿಖೆ ನಂತರ ಮತ್ತೊಂದು ತನಿಖೆಗೆ ಆದೇಶ ನೀಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಕೇಸ್ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದೆ. ಲೋಕಾಯುಕ್ತ(Lokayukta) ಪೊಲೀಸರಿಂದ ತನಿಖೆಗೆ ರಾಜ್ಯ ಸರ್ಕಾರ(State government) ಆದೇಶಿಸಿದೆ. ಸಿಬಿಐ ಅನುಮತಿ ಹಿಂಪಡೆದ ಹಿನ್ನಲೆ ತನಿಖೆ ಹೊಣೆ ಲೋಕಾಯುಕ್ತಕ್ಕೆ ಹೋಗಿದೆ. ಡಿ.22 ರಂದು ಅಧಿಕೃತವಾಗಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಡಿಜಿಪಿಗೆ ಸೂಚನೆ ನೀಡಲಾಗಿದೆ. ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌ಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. 2020ರಲ್ಲಿ ಸಿಬಿಐ ದಾಖಲಿಸಿದ್ದ FIR ನಂಬರ್ 10(A) ವರ್ಗಾವಣೆ ಮಾಡಿದ್ದು, ಸರ್ಕಾರದ ಆದೇಶದಂತೆ ತನಿಖೆ ನಡೆಸಲು ತಂಡವನ್ನು ಲೋಕಾ ಡಿಜಿಪಿ ರಚಿಸಿದ್ದಾರೆ. ಹೊಸದಾಗಿ FIR ದಾಖಲಿಸಿ ಲೋಕಾ ಪೊಲೀಸರು ತನಿಖೆ ನಡೆಸಲಿದ್ದಾರೆ.
ಇದನ್ನೂ ವೀಕ್ಷಿಸಿ: ಅಂಗನವಾಡಿ ಪಕ್ಕದಲ್ಲಿದ್ದ ಹೂ ಕಿತ್ತಿದ್ದೇ ತಪ್ಪಾ? ಇದಕ್ಕೆ ಸಹಾಯಕಿಯ ಮೂಗು ಕಟ್ ಮಾಡೋದಾ ?