Asianet Suvarna News Asianet Suvarna News

ವಿಜಯಪುರ: ಕೋವಿಡ್‌ ಮುಕ್ತ ಕ್ಯಾಂಪಸ್‌ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಂದ ಸಂಕಲ್ಪ

Sep 26, 2021, 10:48 AM IST

ಬೆಂಗಳೂರು (ಸೆ. 26): ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡ ಪ್ರಭ ಹಾಗೂ ರೇವಾ ವಿಶ್ವವಿದ್ಯಾಲಯ ನೇತೃತ್ವದಲ್ಲಿ ವಿಜಯಪುರದಲ್ಲಿ ಕೋವಿಡ್ ಫ್ರೀ ಕ್ಯಾಂಪಸ್ ನಡೆಸಲಾಯಿತು. ಕಾಲೇಜು ವಿದ್ಯಾರ್ಥಿಗಳು, ಪ್ರಾಂಶುಪಾಲರು ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡಿದ್ದಾರೆ. 

ಸುವರ್ಣ ನ್ಯೂಸ್- ಕನ್ನಡ ಪ್ರಭ ಸಹಯೋಗದಲ್ಲಿ ಆಯೋಜನೆ: ಕೋವಿಡ್ ಫ್ರೀ ಕ್ಯಾಂಪಸ್‌ಗೆ ಮೆಚ್ಚುಗೆ

ವಿದ್ಯಾರ್ಥಿಗಳು ತಮ್ಮ ಸ್ವರಕ್ಷಣೆಯ ಜೊತೆಗೆ ಕೋವಿಡ್‌ನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಅರಿತು ಮುಂದೆ ಬರಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಬೇರೆಯವರಲ್ಲಿಯೂ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ಅಲ್ಲದೆ ಸರಿಯಾದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್ ಮನವಿ ಮಾಡಿದರು.