Asianet Suvarna News Asianet Suvarna News

ಕೊರೋನಾ ಅಟ್ಟಹಾಸ: ಬೆಂಗಳೂರಿಗೆ ಕಂಟಕವಾದ 'ಅದೊಂದು ಏರಿಯಾ'..!

ಚಿಕ್ಕಪೇಟೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳ| ಕೊರೋನಾ ಕಾಟದಿಂದ ಕಂಗಾಲಾದ ಚಿಕ್ಕಪೇಟೆ ಜನ| ತರಕಾರಿ ಮಾರುವವರಿಂದ ಹಿಡಿದು ವೈದ್ಯರಿಗೂ ಅಂಟಿದ ಕೊರೋನಾ|

ಬೆಂಗಳೂರು(ಜೂ.15): ನಗರದ ಚಿಕ್ಕಪೇಟೆಯಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಈ ಪ್ರದೇಶದ ಜನರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ. ಪ್ರತಿ ದಿನ ವೈರಸ್‌ ವರದಿಯಲ್ಲಿ ಚಿಕ್ಕಪೇಟೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣಗಳು ಇದ್ದೇ ಇರುತ್ತವೆ. 

ಸೋಂಕಿತರ ಕಣ್ಣೀರಲ್ಲೂ ಕೊರೊನಾ ಇರತ್ತಂತೆ ಜೋಕೆ!

ಇಲ್ಲಿ ತರಕಾರಿ ಮಾರುವವರಿಂದ ಹಿಡಿದು ವೈದ್ಯರಿಗೂ ಕೊರೋನಾ ವೈರಸ್ ಅಂಟಿದೆ. ಇದು ಹೆಸರಿಗಷ್ಟೇ ಚಿಕ್ಕಪೇಟೆ, ಕೊರೋನಾ ವಿಷಯಕ್ಕೆ ಬಂದರೆ ದೊಡ್ಡ ಪೇಟೆಯಾಗಿ ಮಾರ್ಪಟ್ಟಿದೆ. ಚಿಕ್ಕಪೇಟೆಯಲ್ಲಿ ಕೊರೋನಾದ್ದೇ ಆತಂಕ ಎದುರಾಗಿದೆ. ಬೀದಿ ಬದಿ ವ್ಯಾಪಾರಿ, ಬಟ್ಟೆ ವ್ಯಾಪಾರಿಗಳಿಗೂ ಸಹ ಕೋವಿಡ್‌ ಪಾಸಿಟಿವ್‌ ಬಂದಿದೆ.
 

Video Top Stories