ಕೊರೋನಾ ಭೀತಿ: ಕನಕಪುರ 9 ದಿನ ಲಾಕ್‌ಡೌನ್..!

ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕನಕಪುರ ಲಾಕ್‌ಡೌನ್ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ದಿನನಿತ್ಯದ ಬಳಕೆಗೆ ಬೇಕಾದಂತ ವಸ್ತುಗಳ ಖರೀದಿಗೂ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

First Published Jun 22, 2020, 11:53 AM IST | Last Updated Jun 22, 2020, 11:53 AM IST

ಕನಕಪುರ(ಜೂ.22): ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ(ಜೂ.23)ದಿಂದು ಮುಂದಿನ 9 ದಿನಗಳ ಕಾಲ ಕನಕಪುರ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಆಗಲಿದೆ. ಕನಕಪುರ ವರ್ತಕರ ಸಂಘ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದೆ.

ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕನಕಪುರ ಲಾಕ್‌ಡೌನ್ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ದಿನನಿತ್ಯದ ಬಳಕೆಗೆ ಬೇಕಾದಂತ ವಸ್ತುಗಳ ಖರೀದಿಗೂ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಬೆಳಗ್ಗೆ ಏಳು ಗಂಟೆಯಿಂದ 11 ಗಂಟೆಯೊಳಗೆ ದಿನಸಿ ಹಾಗೂ ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇನ್ನು ಮಾಂಸದಂಗಡಿಗಳು ಕೂಡಾ ಬೆಳಗ್ಗೆ 11 ಗಂಟೆವರೆಗೆ ತೆರೆದಿರುತ್ತದೆ.

ಕ್ವಾರಂಟೈನ್ ನಿಯಮ ಪಾಲಿಸಿ, ಕೊರೋನಾದಿಂದ ಬಚಾವಾಗಿ: ವಾರ್‌ ರೂಂ ಮುಖ್ಯಸ್ಥ ಮೌದ್ಗಿಲ್

ಕನಕಪುರದಲ್ಲಿ ಸಾರಿಗೆ ವ್ಯವಸ್ಥೆ ಎಂದಿನಂತೆ ಮುಂದುವರೆಯಲಿದೆ. ಇನ್ನು ಮದ್ಯದಂಗಡಿ ವೇಳಾಪಟ್ಟಿ ನಿಗದಿ ಬಗ್ಗೆ ಅಬಕಾರಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಜುಲೈ 01ರವರೆಗೆ ಕನಕಪುರ ಸ್ವಯಂ ಪ್ರೇರಿತವಾಗಿ ಬಂದ್ ಆಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.