ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ! ಮಕ್ಕಳಿಂದ ಮಲದ ಗುಂಡಿ ಕ್ಲೀನ್‌ ಮಾಡಿಸಿದ ಸಿಬ್ಬಂದಿ !

ಮೊರಾರ್ಜಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ
ಮಕ್ಕಳಿಂದ ಮಲದ ಗುಂಡಿ ಕ್ಲೀನ್ ಮಾಡಿಸಿದ ಸಿಬ್ಬಂದಿ
ಪ್ರಾಂಶುಪಾಲರ ಎದುರೇ ಮಕ್ಕಳಿಂದ ಮಲದ ಗುಂಡಿ ಕ್ಲೀನ್

First Published Dec 17, 2023, 12:47 PM IST | Last Updated Dec 17, 2023, 12:47 PM IST

ಮೊರಾರ್ಜಿ ವಸತಿ ಶಾಲೆಯಲ್ಲಿ(Morarji Residential School) ಅಮಾನವೀಯ ಕೃತ್ಯವೊಂದು ನಡೆದಿದೆ. ಮಕ್ಕಳಿಂದ ಮಲದ ಗುಂಡಿಯನ್ನು ಸಿಬ್ಬಂದಿ ಕ್ಲೀನ್ ಮಾಡಿಸಿದ್ದಾರೆ. ಪ್ರಾಂಶುಪಾಲರ ಎದುರೇ ಮಕ್ಕಳಿಂದ ಮಲದ ಗುಂಡಿ(Toilet pond) ಕ್ಲೀನ್ ಮಾಡಿಸಲಾಗಿದೆ. ಕೋಲಾರ(Kolar) ಜಿಲ್ಲೆಯ ಯಲವಳ್ಳಿಯ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಲವು ದಿನಗಳಿಂದ ಮಕ್ಕಳಿಗೆ(Children) ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ವಾರ್ಡನ್ ಮಂಜುನಾಥ್‌ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೊಡೆಯುವುದು, ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ನೀಡುವ ದೃಶ್ಯಗಳು ಲಭ್ಯವಾಗಿವೆ. ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ 250 ಜನ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಸಿಲಿಕಾನ್‌ ಸಿಟಿಯಲ್ಲಿ ಘನಘೋರ ದುರಂತ ! ಕಾರು ಚಾಲಕನ ಎಡವಟ್ಟಿಗೆ ಕಂದಮ್ಮ ಬಲಿ ?