ವಿಶೇಷ ಚೇತನ ಮಗುವಿಗೆ IAS ಆಸೆ, ನಿತ್ಯ ಹೆಗಲ ಮೇಲೆ ಹೊತ್ತು ಶಾಲೆಗೆ; ಓ ಅಮ್ಮ ನಿನಗೊಂದು ಸಲಾಂ!


ಅಮ್ಮ ಅಂದ್ರೆ ಅದೆಷ್ಟೋ ದೈವಗಳ ರೂಪ. ಅಮ್ಮ ಅಂದ್ರೆ ನಿಜವಾದ ಆಪ್ತ ಹೃದಯ..ಒಂದರ್ಥದಲ್ಲಿ ಹೇಳಬೇಕು ಅಂದ್ರೆ ಪದಗಳೇ ಮೀರಿದ ಮಮತೆಯೇ ಅಮ್ಮ..ಹೌದು ಅಂತಹ ಅಮ್ಮ ಕಷ್ಟ ಕಾಲದಲ್ಲೂ ಸಹ ಮಕ್ಕಳ ಏಳಿಗೆಗೆ ಸದಾಕಾಲ ಕನಸು ಕಾಣುವವಳು ಇದೆ ಮಹಾತಾಯಿ.. ಇಲ್ಲೊಬ್ಬ ಮಗನ ಕನಸಿಗೆ ತಾಯಿಗೆ ಹೆಗಲು ಕೊಟ್ಟಿದ್ದು ಎಲ್ಲರಿಗೂ ಸಹ ಈ ಮಹಾತಾಯಿ ಅದರ್ಶವಾಗಿದ್ದಾಳೆ.. 

First Published Nov 29, 2019, 1:26 PM IST | Last Updated Nov 29, 2019, 1:31 PM IST

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿ ಯ ಜಯಲಕ್ಷ್ಮೀ ಎಂಬ ತಾಯಿ ತನ್ನ ಮಗನ ವಿದ್ಯಾಭ್ಯಾಸಕ್ಕೆ ತನ್ನ ಹೆಗಲು ಕೊಟ್ಟಿದ್ದಾಳೆ. ಇದ್ದ 3 ಮೂವರು ಮಕ್ಕಳಲ್ಲಿ ಮೊದಲನೆಯ ಮಗ ರಾಜೇಶ್ ವಿಶೇಷ ಚೇತನ. ಓದಿನಲ್ಲಿ ಎಲ್ಲರಿಗಿಂತ ಮುಂದೆ ಇರುವ ರಾಜೇಶ್ ಓಡಾಡಲು ಸಹ ಆಗುವುದಿಲ್ಲ. ಆದ್ರೆ ಐಎಎಸ್ ಮಾಡಬೇಕು ಅಂತ ನಿರ್ಧಾರ ಮಾಡಿರುವ ರಾಜೇಶ್ ಗೆ ತಾಯಿಯ ಹೆಗಲು ಕನಸಿನ ಸಾಕಾರಕ್ಕೆ ಕಾರಣವಾಗಿದೆ.

ಅಲ್ಲದೆ ಶಾಲೆ ಇರೋದು ತಮ್ಮ ಹಳ್ಳಿಯಿಂದ 4 ಕಿ ಮಿ ದೂರದಲ್ಲಿರುವ ಮೀರಾಸಾಬಿಹಳ್ಳಿಗೆ ಹೋಗಬೇಕು ಆದ್ರೆ ಅಲ್ಲಿಗೆ ಸರಿಯಾದ ಸಾರಿಗೆ ವ್ಯವಸ್ಥೆಯೂ ಸಹ ಇಲ್ಲ, ಹೀಗಾಗಿ ತನ್ನ ಮಗನನ್ನು ಓದಿಸಲೇಬೇಕು ಅಂತ ತೀರ್ಮಾನ ಮಾಡಿರುವ ಮಹಾತಾಯಿ ನಿತ್ಯವೂ ತನ್ನ ಹೆಗಲ ಮೇಲೆಯೇ ಮಗ ರಾಜೇಶ್ ನನ್ನು ಹೊತ್ತು ಶಾಲೆಗೆ ಕರೆದಿಕೊಂಡು ಹೋಗುತ್ತಾಳೆ.

ಇದನ್ನೂ ಓದಿ | ದೇಶದ ಮೊದಲ ದೃಷ್ಠಿ ಹೀನ ಐಎಎಸ್‌ ಅಧಿಕಾರಿ ಹೆಗ್ಗಳಿಕೆಗೆ ಪ್ರಾಂಜಲ್ ಪಾತ್ರ...

ಹೌದು ನಿತ್ಯವೂ ಸಹ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನೆಲೆ ತಾಯಿಯ ಹೆಗಲೇ ರಾಜೇಶ್ ಗೆ ನೂರಾರು ಕನಸುಗಳ ದಾರಿಯಾಗಿದೆ..ಚಿಕ್ಕ ವಯಸ್ಸಿನಲ್ಲೇ ತಂದೆ ಕಳೆದುಕೊಂಡಿರುವ ರಾಜೇಶ್ ನಾನು ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ ನಿರ್ಧರಿಸಿದ್ದಾನೆ..ಹೀಗಾಗಿಯೇ ಮಾತೃ ಹೃದಯದ ಈ ನಿತ್ಯದ ಹೆಗಲ ಮೇಲಿನ ಸವಾರಿಯಿಂದಾಗಿ ದೊಡ್ಡ ಕನಸು ಕಂಡಿದ್ದಾನೆ..ಒಟ್ಟಾರೆ ಎಲ್ಲವೂ ಇದ್ದು ಶಾಲೆ ಕಲಿಯಲು ಹಿಂದೇಟು ಹಾಕುವ ಮಕ್ಕಳ ನಡುವೆ, ವಿಶೇಷ ಚೇತನವಾದ್ರೂ ಸಹ ಕಲಿಯುವ ಉತ್ಸಾಹ ಕ್ಕೆ ನಮ್ಮದೊಂದು ಸಲಾಂ.. ಈ ಸ್ಟೋರಿ ನೋಡಿ....