ಉಪ ಜಿಲ್ಲಾಧಿಕಾರಿಯಾದ ಮೊದಲ ಅಂಧ ಐಎಎಸ್‌ ಅಧಿಕಾರಿ | ಮಹಾರಾಷ್ಟ್ರ ಮೂಲದ ಪಾಟೀಲ್‌ ತಿರುವನಂತಪುರಂ ಉಪ ಕಲೆಕ್ಟರ್‌ | 2017ರ ಬ್ಯಾಚ್‌ನ ಐಎಎಸ್‌ ಅಧಿಕಾರಿ | ಆರನೇ ವರ್ಷಕ್ಕೆ ದೃಷ್ಟಿಕಳೆದುಕೊಂಡಿದ್ದ ಪಾಟೀಲ್‌

ತಿರುವನಂತಪುರಂ (ಅ. 16): ದೇಶದ ಮೊದಲ ದೃಷ್ಠಿ ಹೀನ ಐಎಎಸ್‌ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಪ್ರಾಂಜಲ್‌ ಪಾಟೀಲ್‌, ಸೋಮವಾರ ತಿರುವನಂತಪುರಂನ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಾಟೀಲ್‌ ಅವರಿಗೆ ನಿರ್ಗಮಿತ ಉಪ ಜಿಲ್ಲಾಧಿಕಾರಿ ಬಿ. ಗೋಪಾಲ ಕೃಷ್ಣನ್‌ ಅಧಿಕಾರ ಹಸ್ತಾಂತರಿಸಿದ್ದಾರೆ.

122 KM ರಾಯಲ್ ಎನ್ ಫೀಲ್ಡ್ ರೈಡ್ ಮಾಡಿದ ಅರುಣಾಚಲ CM

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಹೊಸ ಜವಾಬ್ದಾರಿ ಸ್ವೀಕರಿಸಿದ್ದು ಸಂತೋಷ ಉಂಟು ಮಾಡಿದೆ. ಕೆಲಸ ಮಾಡಿದ ಹಾಗೆ ಜಿಲ್ಲೆಯ ಬಗ್ಗೆ ಹೆಚ್ಚು ತಿಳಿದುಕೊಂಡು ಯೋಜನೆ ರೂಪಿಸಲು ಸಾಧ್ಯವಾಗುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ನನ್ನ ಸಹೋದ್ಯೋಗಿಗಳು ಹಾಗೂ ಜನರ ಸಹಕಾರವನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.

2018ರಿಂದ ಎರ್ನಾಕುಲಂ ಸಹಾಯಕ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದ ಅವರನ್ನು ಸರ್ಕಾರ ತಿರುವನಂತಪುರಂ ಜಿಲ್ಲಾ ಉಪ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಕೆಲ ದಿನಗಳ ಹಿಂದಷ್ಟೇ ಆದೇಶ ಹೊರಡಿಸಿತ್ತು.

ಮೂಲತಃ ಮಹಾರಾಷ್ಟ್ರದ ಉಲ್ಲಾಸ್‌ನಗರ ನಿವಾಸಿಯಾಗಿರುವ ಪಾಟೀಲ್‌, ಆರು ವರ್ಷದ ಮಗುವಿದ್ದಾಗಲೇ ದೃಷ್ಟಿದೋಷಕ್ಕೆ ತುತ್ತಾಗಿದ್ದರು. ರಾಜಕೀಯ ಶಾಸ್ತ್ರದಲ್ಲಿ ಪದವಿ ಮುಗಿಸಿ, ಜೆಎನ್ಯೂನಿಂದ ಅಂತಾರಾಷ್ಟ್ರ ಸಂಬಂಧ ವಿಷಯದಲ್ಲಿ ಉನ್ನತ ಶಿಕ್ಷಣ ಪೂರ್ತಿಗೊಳಿಸಿದ್ದರು. 2016ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 733ನೇ ರಾರ‍ಯಂಕ್‌ ಪಡೆದಿದ್ದ ಪಾಟೀಲ್‌ ಮುಂದಿನ ವರ್ಷ ಎರಡನೇ ಪ್ರಯತ್ನದಲ್ಲಿ 124ನೇ ಸ್ಥಾನವನ್ನು ಗಳಿಸಿದ್ದರು.