Child Complaint to Police: ಅಮ್ಮಾ ಹೊಡೆದಿದ್ದಕ್ಕೆ 100ಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ ಮಗು !
ಅಮ್ಮ ಮಗಳ ಜಗಳದಲ್ಲಿ ಪೊಲೀಸರು ಹೈರಾಣು
ಪುಟ್ಟ ವಿಷಯಕ್ಕೆ ಮಗಳ ಮೇಲೆ ಹಲ್ಲೆ ಮಾಡಿದ ತಾಯಿ
ಕೋಪಗೊಂಡ ಮಗಳಿಂದ 100ಗೆ ಕರೆ ಮಾಡಿ ದೂರು
ಅಮ್ಮ ಹೊಡೆದಳೆಂದು ಚಿಕ್ಕ ಮಗು 100ಗೆ ಕರೆ ಮಾಡಿ, ಪೊಲೀಸರಿಗೆ(Police) ದೂರನ್ನು ನೀಡಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಸದ್ಯ ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮ್ಮ-ಮಗಳ ಜಗಳದಲ್ಲಿ ಪೊಲೀಸರು ಹೈರಾಣಾಗಿದ್ದಾರೆ. ಅಲ್ಲದೇ ಮಾಹಿತಿ ಕೇಳಿದ ಪೊಲೀಸರಿಗೆ ಮಹಿಳೆ ಬಾಯಿಗೆ ಬಂದಂತೆ ಬೈದಿದ್ದಾರೆ ಎಂದು ತಿಳಿದುಬಂದಿದೆ. ಪುಟ್ಟ ವಿಷಯಕ್ಕೆ ಮಗಳ(Child) ಮೇಲೆ ತಾಯಿ ಹಲ್ಲೆ ಮಾಡಿದ್ದು, ಕೋಪಗೊಂಡ ಮಗು 100ಗೆ ಕರೆ ಮಾಡಿದೆ. ಇನ್ನೊಂದು ಘಟನೆಯಲ್ಲಿ ಕ್ರಿಕೆಟ್(Cricket) ಆಟಕ್ಕೆ ಸೇರಿಸಿಕೊಂಡಿಲ್ಲ ಎಂದು ಮಗುವೊಂದು ಕರೆ ಮಾಡಿದೆ. ಬಿಳಿ ಟೀ shirt ತೊಟ್ಟ ಹುಡುಗನಿಂದ ಕರೆ ಬಂದಿದ್ದು, ಕ್ರಿಕೆಟ್ ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು 112 ಗೆ ಕರೆ ಬಂದಿದೆ. ಬಳಿಕ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಂಪ್ಲೇಂಟ್ ಅಟೆಂಡ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: Shoaib Malik-Sania : 13 ವರ್ಷದ ಸಾನಿಯಾ- ಮಲೀಕ್ ದಾಂಪತ್ಯದಲ್ಲಿ ಬಿರುಕು..! ಶೋಯೆಬ್ ಜೀವನಕ್ಕೆ ಎಂಟ್ರಿ ಕೊಟ್ಟ ಪಾಕ್ ನಟಿ..!