ಬಾಗಲಕೋಟೆಯಲ್ಲಿ ಬರ ಅಧ್ಯಯನ ತಂಡದಿಂದ ಸಮೀಕ್ಷೆ: ಅಧಿಕಾರಿಗಳ ಮುಂದೆ ಅನ್ನದಾತರ ಅಳಲು !
ರಾಜ್ಯದಲ್ಲಿ ರೈತ ಮಳೆ ಬೆಳೆ ಇಲ್ಲದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಬರ ಘೋಷಣೆ ಮಾಡಿದ ಜಿಲ್ಲೆಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡ ಸಮೀಕ್ಷೆಗೆ ಮುಂದಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಬಾಗಲಕೋಟೆ ಜಿಲ್ಲೆಯಲ್ಲಿ ಬರದ ವಾಸ್ತವ ಚಿತ್ರಣದ ಸಮೀಕ್ಷೆಗೆ ನಡೆಸಿದ್ರು.
ರಾಜ್ಯದಲ್ಲಿ ಸಮರ್ಪಕ ಮಳೆ ಇಲ್ಲದೇ ಅನ್ನದಾತ ಕಂಗಾಲಾಗಿದ್ದಾನೆ.. ಬರಗಾಲ ಬೇಗುದಿಗೆ ರೈತ ಬೆಂದು ಬೇಸತ್ತಿದ್ದಾನೆ. ಇದರ ಮಧ್ಯೆ ಕೇಂದ್ರ ಬರ(Drought) ಅಧ್ಯಯನ ತಂಡ ರಾಜ್ಯದಲ್ಲಿ ಬೆಳೆ ಸಮೀಕ್ಷೆ ಮಾಡ್ತಿದೆ. ಬಾಗಲಕೋಟೆಯಲ್ಲಿ ಬರ ಸಮೀಕ್ಷೆಗೆ ಬಂದ ಅಧಿಕಾರಿಗಳ ಎದುರು ರೈತರು(Farmers) ತಮ್ಮ ಅಳಲು ತೋಡಿಕೊಂಡಿದ್ದಾರೆ. ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡ ಬಾಗಲಕೋಟೆ(Bagalkote) ಜಿಲ್ಲೆಗೆ ಭೇಟಿ ಕೊಟ್ಟು ಮಳೆ ಅಭಾವದಿಂದ ಹಾನಿಗೊಳಗಾದ ಬೆಳೆಗಳನ್ನ ವೀಕ್ಷಣೆ ಮಾಡಿ ರೈತರ ಸಂಕಷ್ಟ ಆಲಿಸಿದ್ರು. ಮಳೆ- ಬೆಳೆ ಇಲ್ಲದೇ ನಮಗೆ ಸರಿಯಾದ ಕೂಲಿ ಸಿಗ್ತಿಲ್ಲ, ಪರದಾಡುವಂತ ಪರಿಸ್ಥಿತಿ ಎದುರಾರಗಿದೆ ಎಂದು ಬರ ಅಧ್ಯಯನ ತಂಡದ ಎದುರು ರೈತರು, ಮಹಿಳೆಯರು ಗೋಳಾಡಿದ್ರು. ಬಾಗಲಕೋಟೆ ಜಿಲ್ಲೆಯ 9 ತಾಲ್ಲೂಕುಗಳನ್ನ ಬರ ಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದ್ದು, 1 ಲಕ್ಷ 93 ಸಾವಿರ ಹೆಕ್ಟರ್ ಬೆಳೆ ಬರಕ್ಕೆ ತುತ್ತಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದು, ಬರ ಪರಿಹಾರಕ್ಕಾಗಿ 394 ಕೋಟಿ ರೂಪಾಯಿ ಬೇಡಿಕೆಯನ್ನ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಇಟ್ಟಿದೆ. ಜಿಲ್ಲೆಯ ಅನ್ನದಾತನ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿ ಜಿಲ್ಲಾಡಳಿತವಿದ್ದು, ಇದಕ್ಕೆ ಕೇಂದ್ರ ಬರ ಅಧ್ಯಯನ ತಂಡ(Central Drought Study Team) ಯಾವ ರೀತಿ ಪ್ರತಿಕ್ರಿಯಿಸುತ್ತೇ ಅಂತ ಕಾದು ನೋಡಬೇಕಿದೆ.
ಇದನ್ನೂ ವೀಕ್ಷಿಸಿ: ಗೋ ಶಾಲೆ ನಿರ್ವಹಣೆಗಿಲ್ಲ ಸರ್ಕಾರದ ಅನುದಾನ! ಬರದ ನಡುವೆ ಗೋಪಾಲಕರ ಗೋಳು ಕೇಳೋರಿಲ್ಲ