ಬಿಲ್ಲವರಿಗೆ ನಿಗಮ ಘೋಷಣೆ ಆದ್ರೆ ನಮಗೆ ಯಾಕಿಲ್ಲ: ಸರ್ಕಾರದ ವಿರುದ್ಧ ಬಂಟರು ಕಿಡಿ
ರಾಜ್ಯ ಸರ್ಕಾರಕ್ಕೆ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೊಂದು ಟೆನ್ಷನ್ ಶುರುವಾಗಿದ್ದು, ಸರ್ಕಾರದ ವಿರುದ್ಧ ಬಂಟರು ಸಮರ ಸಾರಿದ್ದಾರೆ.
ರಾಜ್ಯ ಬಿಜೆಪಿಗೆ ಬಂಟರ ಅಸಮಾಧಾನ ಕಂಟಕವಾಗಿ ಪರಿಣಮಿಸಿದೆ. ಬಿಲ್ಲವರಿಗೆ ನಿಗಮ ಘೋಷಣೆಯಾದ ಬೆನ್ನಲೇ, ಸರ್ಕಾರದ ವಿರುದ್ಧ ಬಂಟರು ಸಮರ ಸಾರಿದ್ದಾರೆ. ಬಿಲ್ಲವರಿಗೆ ನಿಗಮ ಘೋಷಣೆ ಆದ್ರೆ, ಬಂಟವರಿಗೆ ಮಾತ್ರ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರತ್ಯೇಕ ನಿಗಮ ಹಾಗೂ 3ಬಿಯಿಂದ 2ಎಗೆ ಮೀಸಲಾತಿಗೆ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಉತ್ತರದ ಎಚ್ಚರಿಕೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳನ್ನು ಸೋಲಿಸೋ ಸಾಮರ್ಥ್ಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಕರಾವಳಿಯಲ್ಲಿ ಮತ್ತೊಂದು ಪ್ರಬಲ ಸಮುದಾಯವಾಗಿರೋ ಬಂಟರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3.5 ಲಕ್ಷ ಬಂಟ ಮತದಾರರು ಇದ್ದಾರೆ.
ನಾಳೆಯಿಂದ ಸರ್ಕಾರ ನೌಕರರ ಪ್ರೊಟೆಸ್ಟ್: ಎಲ್ಲಾ ಸೇವೆಗಳು ವಿಳಂಬ ಸಾಧ್ಯತ ...