Asianet Suvarna News Asianet Suvarna News

ರಾಜ್ಯ ರಾಜಧಾನಿಯಲ್ಲಿ ಕರಾವಳಿ ಕ್ರೀಡೆ ಗಮ್ಮತ್ತು: ಬೆಂಗಳೂರಲ್ಲೂ ನಡೆಯುತ್ತಂತೆ ಕಂಬಳ ಉತ್ಸವ..!

ಕಂಬಳ ಅಂದ್ರೆ ಕರಾವಳಿ ಭಾಗದಲ್ಲಿ ಫೇಮಸ್. ಆದ್ರೀಗ ಕರಾವಳಿಯ ಕಂಬಳ ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆಯಾಗ್ತಿರುವುದು ವಿಶೇಷ. ಬೆಂಗಳೂರಿನಲ್ಲಿ ಕಂಬಳ ಎಲ್ಲಿ ನಡೆಯುತ್ತೆ, ಏನೇನು ವಿಶೇಷ ಅಂತೀರಾ ಇಲ್ಲಿದೆ ಡೀಟೇಲ್ಸ್.

ಕಂಬಳ ಕರಾವಳಿಯಲ್ಲಿ ನಡೆಯುವ ಈ ಗ್ರಾಮೀಣ ಕ್ರೀಡೆ ಎಂಥವರನ್ನು ಕೂಡ ಸೆಳೆಯುತ್ತೆ. ಹದಗೊಂಡ ಕೆಸರು ಗದ್ದೆಯಲ್ಲಿ ಕೋಣ ಓಡುವುದನ್ನ ನೋಡೋದೆ ಬಲುಚಂದ. ಬಲಿಷ್ಟ ಬಾಹುಗಳ ಓಟಗಾರರನ್ನ ವೀಕ್ಷಿಸಲು ಸಾವಿರಾರು ಜನ ಸೇರ್ತಾರೆ. ಸದ್ಯ ಕರಾವಳಿ ಕ್ರೀಡೆಯ ಕಂಪು ರಾಜಧಾನಿಗೂ ಹಬ್ಬುತ್ತಿದೆ. ಬೆಂಗಳೂರು(Bengaluru) ಕಂಬಳಕ್ಕೆ ಡೇಟ್ ಫಿಕ್ಸ್ ಆಗಿದೆ. ಅರಮನೆ ಮೈದಾನದಲ್ಲಿ ನವೆಂಬರ್ 24, 25 ಮತ್ತು 26ರಂದು ಕಂಬಳ ಹಬ್ಬ ನಡೆಯುತ್ತೆ. ‘ಬೆಂಗಳೂರು ಕಂಬಳ, ನಮ್ಮ ಕಂಬಳ’(Bengaluru kambala Namma Kambala) ಎಂಬ ಶಿರ್ಷಿಕೆಯಡಿ ಕಂಬಳ ಆಯೋಜಿಸಲಾಗಿದ್ದು, ಸುಮಾರು 150 ಕೋಣಗಳು ಭಾಗಿಯಾಗಲಿವೆ. ಕಂಬಳ ಆಯೋಜನೆಗೆ ಹತ್ತಾರು ಎಕರೆ ವಿಶಾಲ ಜಾಗ ಬೇಕು. ಹತ್ತಾರು ಸವಾಲುಗಳನ್ನ ಮೆಟ್ಟಿನಿಂತು ಕೊನೆಗೂ ಬೆಂಗಳೂರಲ್ಲಿ ಕಂಬಳ ನಡೆಸಲಾಗ್ತಿದೆ. ರಾಣಿ ಪ್ರಮೋದಾದೇವಿಯವರು ಅರಮನೆ ಮೈದಾನದಲ್ಲಿ ಕಂಬಳ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 4 ವಿಭಾಗಗಳಲ್ಲಿ ಕಂಬಳ ಸ್ಪರ್ಧೆ ನಡೆಯುತ್ತಿದೆ. ಅಡ್ಡಹಲಗೆ, ಕನೆಹಲಗೆ, ನೇಗಿಲು, ಹಗ್ಗದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಂಬಳದ ವಿಶೇಷ ಆಕರ್ಷಣೆ ಕಾಮೆಂಟ್ರಿಯಲ್ಲೂ ಬದಲಾವಣೆ ತರಲಾಗಿದೆ. ಬೆಂಗಳೂರು ಮಂದಿಗೆ ಅರ್ಥವಾಗುವಂತೆ ಕನ್ನಡದಲ್ಲೇ ಕಾಮೆಂಟ್ರಿ ನಡೆಸಲಾಗುತ್ತೆ. ವೀಕ್ಷಕರಿಗೆ ಉಚಿತ ಅವಕಾಶವಿರುತ್ತೆ ಅಂತ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ರು. ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ ಕಂಬಳ ನಡೆಯುತ್ತಿದೆ. ಸದ್ಯದಲ್ಲೇ ಅರಮನೆ ಮೈದಾನದಲ್ಲಿ ಕಂಬಳಕ್ಕೆ ಸಿದ್ಧತೆ ಕಾರ್ಯ ಆರಂಭವಾಗಲಿದೆ. 

ಇದನ್ನೂ ವೀಕ್ಷಿಸಿ:  ರಾಯಚೂರಿನಲ್ಲಿ ಸರ್ಕಾರಿ ಶಾಲೆ ತೊರೆಯುತ್ತಿರುವ ಮಕ್ಕಳು: ಶಿಕ್ಷಕರ ಕೊರತೆ..ವಿದ್ಯಾರ್ಥಿಗಳು ಕೆಲಸಕ್ಕೆ ಹಾಜರ್..!

Video Top Stories