Asianet Suvarna News Asianet Suvarna News

ರಾಯಚೂರಿನಲ್ಲಿ ಸರ್ಕಾರಿ ಶಾಲೆ ತೊರೆಯುತ್ತಿರುವ ಮಕ್ಕಳು: ಶಿಕ್ಷಕರ ಕೊರತೆ..ವಿದ್ಯಾರ್ಥಿಗಳು ಕೆಲಸಕ್ಕೆ ಹಾಜರ್..!

ರಾಯಚೂರು ಜಿಲ್ಲೆಯಲ್ಲಿ ಶಿಕ್ಷಕರ ವರ್ಗಾವಣೆ ಶುರುವಾಗಿದೆ. ಶಿಕ್ಷಕರು ವರ್ಗಾವಣೆ ಆಗಿ ಬೇರೆ ಕಡೆ ಹೋದ್ರೆ, ಶಾಲೆಯಲ್ಲಿ ಇದ್ದ ಮಕ್ಕಳು ಈಗ ಶಾಲೆಗೆ ಗೈರಾಗಿ ಕೆಲಸಕ್ಕೆ ಹಾಜರ್ ಆಗುತ್ತಿದ್ದಾರೆ. 

ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಿದ್ರೆ.. ರಾಯಚೂರಲ್ಲಿ(Raichur) ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳವಾಗ್ತಿದೆ.. ಜಿಲ್ಲೆಯಲ್ಲಿ ಶಾಲೆಗಳು ಖಾಲಿ ಖಾಲಿ ಹೊಡೆಯುತ್ತಿದ್ದು.. ಮಕ್ಕಳು ಟೆಂಪೋದಲ್ಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ರಾಯಚೂರಿನಲ್ಲಿ  ಶಿಕ್ಷಕರ ವರ್ಗಾವಣೆಯಿಂದ( Teachers Transfer) ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬಿದ್ದಿದೆ. ಮಕ್ಕಳು ಕಲಿಯುವ ವಯಸ್ಸಿನಲ್ಲಿ ಕೆಲಸ ಮಾಡ್ತಿದ್ದಾರೆ.. ಬಾಲ ಕಾರ್ಮಿಕರ (Child labour)ಸಂಖ್ಯೆ ಹೆಚ್ಚಾಗುತ್ತಿದೆ.. ಜಿಲ್ಲೆಯ 1,675 ಸರ್ಕಾರಿ ಶಾಲೆಗಳಲ್ಲಿ 10,610 ಶಿಕ್ಷಕರು ಕಾರ್ಯನಿರ್ವಹಿಸಬೇಕಿತ್ತು.ಆದ್ರೆ ಶಿಕ್ಷಕರ ವರ್ಗಾವಣೆಯಿಂದ ಜಿಲ್ಲೆಯಲ್ಲಿ ಕೇವಲ 5,266 ಶಿಕ್ಷಕರು ಮಾತ್ರ ಇದ್ದಾರೆ. ಜಿಲ್ಲೆಯ 160ಕ್ಕೂ ಹೆಚ್ಚು ಶಾಲೆಯಲ್ಲಿ ಒಬ್ಬರೇ ಒಬ್ಬರು ಶಿಕ್ಷಕರು ಇಲ್ಲ. ಇದರಿಂದಾಗಿ ಮಕ್ಕಳು(children) ತರಗತಿಗಳಿಗೆ ಗೈರಾಗಿ, ಪೋಷಕರ ಜೊತೆಗೆ ಕೂಲಿ ಕೆಲಸಕ್ಕೆ ಹೋಗ್ತಿದ್ದಾರೆ. ಇತ್ತ ಸರ್ಕಾರಿ ಶಾಲೆಗೆ ಹೋದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಶಿಕ್ಷಕರ ನೇಮಿಸಿ ಅಂತಾ ಪೋಷಕರು ಮನವಿ ಮಾಡಿದ್ದಾರೆ. ಮಕ್ಕಳ ಹಾಜರಾತಿ ಕಡಿಮೆಯಾಗ್ತಿರುವ ಪ್ರತಿಕ್ರಿಯಿಸಿದ ಡಿಡಿಪಿಐ, ಮಕ್ಕಳು ಶಾಲೆಗೆ ಗೈರು ವಿಚಾರ ಗಮನಕ್ಕೆ ಬಂದಿದೆ.ಸಮಗ್ರ ಕರ್ನಾಟಕ ಶಿಕ್ಷಣದ ಅಡಿಯಲ್ಲಿ ಜಾಗೃತಿ ಜಾಥಾ ಮಾಡಿ ಮಕ್ಕಳನ್ನ ಶಾಲೆಗೆ ಕರೆದು ತರುತ್ತೇವೆ ಎಂದ್ರು.ಇನ್ನಾದ್ರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಮಕ್ಕಳು ಬಾಲಕಾರ್ಮಿಕರಾಗದಂತೆ ತಡೆಯಬೇಕಿದೆ. ಸರಿಯಾಗಿ ಶಿಕ್ಷಕರ ನೇಮಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕಿದೆ.

ಇದನ್ನೂ ವೀಕ್ಷಿಸಿ:  ಉನ್ನತ ಶಿಕ್ಷಣ ಇಲಾಖೆಯಲ್ಲಿ ಮತ್ತೆ ಅಂಕಪಟ್ಟಿ ಗೊಂದಲ: ಭೌತಿಕ ಅಂಕಪಟ್ಟಿ ನೀಡಲು ವಿವಿಗಳ ಮೀನಾಮೇಷ..!

Video Top Stories