Asianet Suvarna News Asianet Suvarna News

ಬೆಂಗಳೂರು;  ಬಾಯ್ಲರ್  ಸ್ಫೋಟವಾಗಿ ಉಸಿರು ಕಟ್ಟಿದರೂ ಕ್ಯಾರೆ ಅನ್ನದ ಅಧಿಕಾರಿಗಳು!

Sep 24, 2021, 8:07 PM IST

ಬೆಂಗಳೂರು(ಸೆ. 24)  ಅತ್ತಿಬೆಲೆಯಲ್ಲಿ ಬಾಯ್ಲರ್ ಸ್ಫೋಟವಾಗಿದ್ದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಪದೇ ಪದೇ ಕಂಪನಿಯಿಂದ ಈ ರೀತಿ ಅವಘಡವಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಲಕ್ಷ್ಯಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಿಗೂಢ ಸ್ಫೋಟಕ್ಕೆ ಏನು ಕಾರಣ?

ಪ್ರತಿದಿನ ಹೊಗೆ ತುಂಬಿಕೊಳ್ಳುತ್ತಿದೆ. ಇವತ್ತು  ಬಾಯ್ಲರ್ ಸ್ಫೋಟವಾಗಿದ್ದು ಜನ ಉಸಿರಾಡಲು ಕಷ್ಟಪಡುವ ಸ್ಥಿತಿ ನಿರ್ಮಾಣವಾಯಿತು. ರಾಸಾಯನಿಕ ಕಾರ್ಖಾನೆ ಐದು ವರ್ಷಗಳಿಂದ ತೊಂದರೆ ನೀಡುತ್ತಿದ್ದು  ಪರಿಹಾರ ಇಲ್ಲವಾಗಿದೆ ಎಂದು ಜನ ಆರೋಪಿಸಿದರು. ಮಾಧ್ಯಮಗಳಿಗೂ ಒಳಗೆ ಪ್ರವೇಶ ನೀಡಲಿಲ್ಲ. ಕಾರ್ಖಾನೆ ಸ್ಥಳಾಂತರ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದರು.