Asianet Suvarna News Asianet Suvarna News

ರಕ್ಕಸ ರಾಜಕಾಲುವೆಗಳು: ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ

ರಾಜಕಾಲುವೆ ತೆರೆದ ಸ್ಥಿತಿಯಲ್ಲಿದ್ರು 8 ತಿಂಗಳವರೆಗೆ ಬಿಬಿಎಂಪಿ ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ಅದರ ಮಧ್ಯೆ ರಾಜಕಾಲುವೆಗೆ ವ್ಯಕ್ತಿಯೊಬ್ಬರು ಬಿದ್ದು ಸಾವನ್ನಪ್ಪಿದ್ದರು. ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ  ಎದ್ನೋ ಬಿದ್ನೋ ಅಂತಾ  ರಾಜಕಾಲುವೆ ಸರಿಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಅದೆಷ್ಟೋ ರಕ್ಕಸ ರಾಜಕಾಲುವೆಗಳು ಜನರ ಜೀವವನ್ನ ಬಲಿ ಪಡೆಯುತ್ತಲೇ ಬಂದಿವೆ. ಬಿಬಿಎಂಪಿ ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲ ಅನ್ನೋ ರೀತಿ ನಿರ್ಲಕ್ಷ್ಯ ವಹಿಸಿತ್ತು. ಬೆಂಗಳೂರಿನ ರುಕ್ಮಿಣಿ ನಗರದಲ್ಲಿ ರಾಜಕಾಲುವೆ ಮೇಲಿನ ಸ್ಲ್ಯಾಬ್ ಓಪನ್ ಮಾಡಿ 8 ತಿಂಗಳು ಕಳೆದಿತ್ತು. ರಾಜಕಾಲುವೆ ತೆರೆದ ಸ್ಥಿತಿಯಲ್ಲಿದ್ರು 8 ತಿಂಗಳವರೆಗೆ ಬಿಬಿಎಂಪಿ ಮಾತ್ರ ತಲೆಕೆಡಿಸಿಕೊಂಡಿರಲ್ಲ. ಅದರ ಮಧ್ಯೆ ರಾಜಕಾಲುವೆಗೆ ವ್ಯಕ್ತಿಯೊಬ್ಬರು ಬಿದ್ದು ಸಾವನ್ನಪ್ಪಿದ್ದರು. ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ. ಏಷ್ಯಾನೆಟ್ ಸುವರ್ಣನ್ಯೂಸ್ನ ಬಿಗ್-3ಯಲ್ಲಿ ಅಕ್ಟೋಬರ್ 17 ರಂದು ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳನ್ನ ಖಡ್ಕ್ ಆಗಿಯೇ ತರಾಟೆಗೆ ತೆಗೆದುಕೊಂಡಿತ್ತು. ಆದಾದ ನಂತರ ಎದ್ನೋ ಬಿದ್ನೋ ಅಂತಾ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿದ್ರು. ಸಾಕಷ್ಟು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದ ಕೆಲಸ ಮತ್ತೆ ಚುರುಕು ಗೊಂಡಿತು. ಇದನ್ನ ಕಂಡ ಸ್ಥಳಿಯರು ನಾವು  ಅದೆಷ್ಟೇ ಬಾರಿ ಮನವಿ ಮಾಡಿದ್ರು ಖ್ಯಾರೆ ಅಂತಿರಲಿಲ್ಲ. ನಿಮ್ಮ ಸುವರ್ಣನ್ಯೂಸ್ ಬಿಗ್-3. BIG-3 ಗೆ ಯಾರೂ ಟಾರ್ಗೇಟ್ ಆಲ್ಲ. ನಮಗೆ ಜನರ ಸಮಸ್ಯೆಗಳೇ ಟಾರ್ಗೇಟ್.

Video Top Stories