ಬೆಂಗಳೂರು ಟ್ರಾಫಿಕ್ ಚಿತ್ರಣ ಬದಲಿಸಿದ ವಿಶೇಷ ಕಮಿಷನರ್ ಎಂ.ಎಂ ಸಲೀಂ..!
ಬೆಂಗಳೂರಿನಲ್ಲಿ ಸ್ಪೆಷಲ್ ಕಮಿಷನರ್ ನೇಮಕವಾದ ಬಳಿಕ ಟ್ರಾಫಿಕ್ ಚಿತ್ರಣ ಬದಲಾಗಿದ್ದು, ಸಂಚಾರಿ ಪೊಲೀಸರ ಕೆಲಸಕ್ಕೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಬೆಂಗಳೂರು ನಗರದ ‘ವಿಶೇಷ ಕಮಿಷನರ್’ (ಸಂಚಾರ) ಆಗಿ ಎಂ.ಎ. ಸಲೀಂ ಅಧಿಕಾರಿ ವಹಿಸಿಕೊಂಡ ನಂತರ, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಪಾರ್ಕಿಂಗ್‌ಗೆ ಅನುಮತಿ ಇದ್ದಲ್ಲಿ ಮಾತ್ರ ಪಾರ್ಕಿಂಗ್. ಪಾರ್ಕಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸುವವರ ವಿರುದ್ಧ ಐಪಿಸಿ ಸೆಕ್ಷನ್ 283ರ ಪ್ರಕಾರ FIR ದಾಖಲಿಸಲು ನಿರ್ಧಾರ ಮಾಡಲಾಗಿದೆ. ಹಾಫ್ ಹೆಲ್ಮೆಟ್ ಹಾಕುವವರಿಗೆ ಟ್ರಾಫಿಕ್ ಕಮಿಷನರ್ ವಾರ್ನಿಂಗ್ ನೀಡಿದ್ದಾರೆ.