Asianet Suvarna News Asianet Suvarna News

ಬಳ್ಳಾರಿಯಲ್ಲಿ ಸೃಷ್ಟಿಯಾಗಿದೆ ದ್ವೀಪ! ಅಧಿಕಾರಿಗಳೇ ಬಂದು ಸ್ವಲ್ಪ ನೋಡಿಪಾ..!

ಬಳ್ಳಾರಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಸಿರಗುಪ್ಪ ತಾಲೂಕಿನ ಎಚ್. ಹೊಸಳ್ಳಿ ಮತ್ತು ಹಾಗಲೂರು ಗ್ರಾಮಗಳು ಜಲಾವೃತವಾಗಿವೆ. 

ಬೆಂಗಳೂರು (ಸೆ. 13): ಬಳ್ಳಾರಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಸಿರಗುಪ್ಪ ತಾಲೂಕಿನ ಎಚ್. ಹೊಸಳ್ಳಿ ಮತ್ತು ಹಾಗಲೂರು ಗ್ರಾಮಗಳು ಜಲಾವೃತವಾಗಿವೆ. 

ಕೆಂಚಹಳ್ಳ ಮತ್ತು ಹೀರೆಹಳ್ಳಗಳಿಂದ ಜಲಾವೃತಗೊಂಡಿವೆ ಗ್ರಾಮಗಳು. 1998ರಲ್ಲಿ ಇದೇ ಹಳ್ಳದ ನೀರಿನಲ್ಲಿ 9 ಜನರು ಕೊಚ್ಚಿಕೊಂಡು ಹೋಗಿದ್ರಂತೆ! ಆಗ (1998ರಲ್ಲಿ) ಸೇತುವೆ ಎತ್ತರಿಸೋದಾಗಿ ಭರವಸೆ ನೀಡಿದ್ದ ಸರ್ಕಾರ ಇದುವರೆಗೂ ಭರವಸೆ ಈಡೇರಿಸಿಲ್ಲ. 

ಆಗ ಕುಡಿಯುವ ನೀರಿಗೆ ಹಾಹಾಕಾರ, ಈಗ ಅಂತರ್ಜಲವೇ ಧಾರಾಕಾರ; ರೈತರಿಗೆ ತಪ್ಪಿಲ್ಲ ಆತಂಕ!

ಪ್ರತಿಬಾರಿ ಕರ್ನಾಟಕ ಮತ್ತು ಆಂಧ್ರದಲ್ಲಿ  ಮಳೆಬಂದಾಗ  ಈ ಗ್ರಾಮದ ಪರಿಸ್ಥಿತಿ ಇದೇ ರೀತಿ ಇರುತ್ತದೆ. ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

Video Top Stories