Asianet Suvarna News Asianet Suvarna News

ನನ್ನ ವಿರೋಧಿಗಳಿಗೆ ನನ್ನ ಮೀಸೆಯೇ ಉತ್ತರ ಎಂದ ನೂತನ ಸಚಿವ

ಸಿಎಂ ನನಗೆ ಫೋನ್‌ ಮಾಡಿದ್ದು ನನ್ನ ಬದುಕಿನ ಮಧುರ ಕ್ಷಣ|  ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ|ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ ಬಿ. ಸಿ.ಪಾಟೀಲ್‌|  

ಬೆಂಗಳೂರು(ಫೆ.06): ಸಿಎಂ ಬಿ. ಎಸ್. ಯಡಿಯೂರಪ್ಪ ನನಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಮಾಡಿ ಅಂತ ಹೇಳಿದ್ದಾರೆ. ಸಿಎಂ ನನಗೆ ಫೋನ್‌ ಮಾಡಿದ್ದು ನನ್ನ ಬದುಕಿನ ಮರೆಯಲಾಗದ ಕ್ಷಣವಾಗಿದೆ ಎಂದು ಹಿರೇಕೆರೂರು ಶಾಸಕ ಹಾಗೂ ನೂತನ ಬಿ. ಸಿ. ಪಾಟೀಲ ಹೇಳಿದ್ದಾರೆ.

ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಅವರು, ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ವಿರೋಧಿಗಳಿಗೆ ನನ್ನ ಮೀಸೆಯೇ ಉತ್ತರ ಎಂದು ಹೇಳಿದ್ದಾರೆ.  ಸಚಿವರಾಗಿ ಒಳ್ಳೆಯ ಕೆಲಸ ಮಾಡಿ ಜನರ ವಿಶ್ವಾಸ ಗಳಿಸುತ್ತೇವೆ ಎಂದು ಹೇಳಿದ್ದಾರೆ.
 

Video Top Stories