Asianet Suvarna News Asianet Suvarna News
breaking news image

ಮಂಕಡಿಂಗ್‌ಗೂ ಮುನ್ನ ಮಿಚೆಲ್ ಸ್ಟಾರ್ಕ್‌ ನೋಡಿ ಕಲೀರಿ: ಅಶ್ವಿನ್‌ಗೆ ಫ್ಯಾನ್ಸ್‌ ಬುದ್ದಿಮಾತು..!

ಮಂಕಡಿಂಗ್ ಎಂದರೆ ಚೆಂಡು ಎಸೆಯುವ ಮುನ್ನ ನಾನ್‌ ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್‌ ಬಿಟ್ಟು ಮುಂದೆ ಹೋದಾಗ ಬೌಲರ್ ರನೌಟ್ ಮಾಡುವುದನ್ನು ಮಂಕಡ್ ರನೌಟ್ ಎನ್ನುತ್ತಾರೆ. ಕ್ರಿಕೆಟ್‌ನಲ್ಲಿ ಇದಕ್ಕೆ ಅವಕಾಶವಿದೆಯಾದರೂ, ಕ್ರೀಡಾಸ್ಫೂರ್ತಿಗೆ ಇದು ವಿರುದ್ಧವಾಗಿದೆ.

ಬೆಂಗಳೂರು(ಸೆ.18): ಕಳೆದ ವರ್ಷದ ಐಪಿಎಲ್‌ ವೇಳೆ ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದಲ್ಲಿ ರವಿಚಂದ್ರನ್ ಅಶ್ವಿನ್‌ ರಾಜಸ್ಥಾನದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ ಅವರನ್ನು ಮಂಕಡಿಂಗ್ ಮಾಡಿದ್ದರು. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗಿದ್ದರು.

ಮಂಕಡಿಂಗ್ ಎಂದರೆ ಚೆಂಡು ಎಸೆಯುವ ಮುನ್ನ ನಾನ್‌ ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್‌ ಬಿಟ್ಟು ಮುಂದೆ ಹೋದಾಗ ಬೌಲರ್ ರನೌಟ್ ಮಾಡುವುದನ್ನು ಮಂಕಡ್ ರನೌಟ್ ಎನ್ನುತ್ತಾರೆ. ಕ್ರಿಕೆಟ್‌ನಲ್ಲಿ ಇದಕ್ಕೆ ಅವಕಾಶವಿದೆಯಾದರೂ, ಕ್ರೀಡಾಸ್ಫೂರ್ತಿಗೆ ಇದು ವಿರುದ್ಧವಾಗಿದೆ.

IPL 2020: ಈ ಐವರು ಯುವ ಆಟಗಾರರ ಮೇಲೆ ಕಣ್ಣಿಡಿ..!

ಅಶ್ವಿನ್ ಮಂಕಡಿಂಗ್ ಮಾಡಿ ಒಂದೂವರೆ ವರ್ಷಗಳೇ ಕಳೆದರೂ ಆ ಚರ್ಚೆ ಮಾತ್ರ ನಿಂತಿಲ್ಲ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ಆದಿಲ್ ರಶೀದ್ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಕ್ರೀಸ್‌ ಬಿಟ್ಟು ಮುಂದೆ ಹೋಗಿದ್ದರು. ಈ ವೇಳೆ ಸ್ಟಾರ್ಕ್ ಮಂಕಡಿಂಗ್ ಮಾಡುವ ಬದಲು ಎಚ್ಚರಿಕೆ ನೀಡಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories