Asianet Suvarna News Asianet Suvarna News

ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವರ ಮಗ ಸೇರಿ 14 ಮಂದಿ ವಿರುದ್ಧ ಕೇಸ್!

Oct 4, 2021, 3:25 PM IST

ಲಖೀಂಪುರ(ಅ.04) ಉತ್ತರಪ್ರದೇಶದ(Uttar Pradesh) ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ(Keshav Prasad Maurya) ಅವರ ಭೇಟಿ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದು 8 ಜನರು ಸಾವಿಗೆ ಕಾರಣವಾದ ಘಟನೆಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಪುತ್ರ ಸೇರಿ ಒಟ್ಟು 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಬಳಿಕ ಲಖೀಂಪುರದಲ್ಲಿ(lakhimpur) ಬೂದಿ ಮುಚ್ಚಿದ ಕೆಂಡದಂತಾಗಿದೆ. ಸ್ಥಳದಲ್ಲಿ ಪೊಲಿಸರು ನೆರೆದಿದ್ದು, ಅಹಿತಕರ ಘಟನೆಗಳು ಮತ್ತೆ ನಡೆಯದಂತೆ ಎಚ್ಚರವಹಿಸಲಾಘಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ. 

Video Top Stories