Asianet Suvarna News Asianet Suvarna News

UP Elections: ಪೂರ್ವಾಂಚಲ ಕೈ ವಶಕ್ಕೆ ಖುದ್ದು ಫೀಲ್ಡಿಗಿಳಿಯಲಿದ್ದಾರೆ ಪ್ರಧಾನಿ ಮೋದಿ..!

ಉತ್ತರ ಪ್ರದೇಶದಲ್ಲಿ ಬಿಜೆಪಿ ಅದಿಕಾರ ಉಳಿಸಿಕೊಳ್ಳುತ್ತಾ, ಇಲ್ವಾ ಎಂದು ನಿರ್ಧರಿಸೋದು 6 ಹಾಗೂ 7 ನೇ ಹಂತದ ಚುನಾವಣೆ. ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಪೂರ್ವಾಂಚಲ ಭಾಗದಲ್ಲಿ ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಅದಕ್ಕೂ ಮುನ್ನ, ಸ್ವತಃ ಪ್ರಧಾನಿ ಮೋದಿ ಪೂರ್ವಾಂಚಲದಲ್ಲಿ ಪ್ರಚಾರ ನಡೆಸಲಿದ್ದಾರೆ. 

First Published Feb 26, 2022, 5:24 PM IST | Last Updated Feb 26, 2022, 5:38 PM IST

ಉತ್ತರ ಪ್ರದೇಶದಲ್ಲಿ ಬಿಜೆಪಿ ಅದಿಕಾರ ಉಳಿಸಿಕೊಳ್ಳುತ್ತಾ, ಇಲ್ವಾ ಎಂದು ನಿರ್ಧರಿಸೋದು 6 ಹಾಗೂ 7 ನೇ ಹಂತದ ಚುನಾವಣೆ. ಬಿಜೆಪಿ ಪಾಲಿಗೆ ನಿರ್ಣಾಯಕವಾಗಿರುವ ಪೂರ್ವಾಂಚಲ ಭಾಗದಲ್ಲಿ ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಅದಕ್ಕೂ ಮುನ್ನ, ಸ್ವತಃ ಪ್ರಧಾನಿ ಮೋದಿ ಪೂರ್ವಾಂಚಲದಲ್ಲಿ ಪ್ರಚಾರ ನಡೆಸಲಿದ್ದಾರೆ. 

UP Election: ಏನಿದು ಬಿಜೆಪಿ+ ಬೆಹನ್‌ಜೀ ಹೊಗಳಿಕೆ ರಾಜಕಾರಣ ರಹಸ್ಯ.?

26 ಜಿಲ್ಲೆಗಳನ್ನು ಒಳಗೊಂಡ ಪೂರ್ವಾಂಚಲದಲ್ಲಿ 156 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 45 ಕ್ಷೇತ್ರಗಳಿಗೆ ಈಗಾಗಲೇ ಮತದಾನ ಮುಗಿದಿದ್ದು, 111 ಕ್ಷೇತ್ರಗಳಲ್ಲಿ 6 ಹಾಗೂ 7 ನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 2017 ರಲ್ಲಿ ಪೂರ್ವಾಂಚಲದಲ್ಲಿ ಬಿಜೆಪಿ 106 ಕ್ಷೇತ್ರಗಳನ್ನು ಗೆದ್ದು ಅಧಕಾರಕ್ಕೇರಿತ್ತು. ಈ ಬಾರಿ ಎಷ್ಟು ಸ್ಥಾನ ಗೆಲ್ಲಲಿದೆ ಕಾದು ನೋಡಬೇಕಿದೆ.