Asianet Suvarna News Asianet Suvarna News

UP Elections: ಉತ್ತರ ಪ್ರದೇಶದಲ್ಲಿ ಇನ್ನೇನಿದ್ದರೂ ಅಭಿವೃದ್ಧಿ, ಜಾತಿವಾದಕ್ಕೆ ಗುಡ್‌ಬೈ: ಮೋದಿ

ಉತ್ತರ ಪ್ರದೇಶ ಚುನಾವಣಾ (Uttar Pradesh Elections) ಅಖಾಡದಲ್ಲಿ ಮೋದಿ (PM Modi) ಮತ್ತೆ ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದ್ದಾರೆ. 

First Published Mar 1, 2022, 11:40 AM IST | Last Updated Mar 1, 2022, 3:59 PM IST

ಉತ್ತರ ಪ್ರದೇಶ ಚುನಾವಣಾ (Uttar Pradesh Elections) ಅಖಾಡದಲ್ಲಿ ಮೋದಿ (PM Modi) ಮತ್ತೆ ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದ್ದಾರೆ. ಕಳೆದೈದು ಹಂತದ ಮತದಾನದಲ್ಲಿ ಉತ್ತರ ಪ್ರದೇಶದ ಮತದಾರರು ಕುಟುಂಬ ರಾಜಕಾರಣವನ್ನು ತಿರಸ್ಕರಿಸಿದ್ದಾರೆ, ಎಂದು ಬಲ್ಲಿಯಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಹೇಳಿದ್ದಾರೆ.  ಉತ್ತರ ಪ್ರದೇಶವನ್ನು ವಾಹನಕ್ಕೆ ಹೋಲಿಸಿದ ಮೋದಿ, ಉತ್ತರ ಪ್ರದೇಶ ಇನ್ಮುಂದೆ ಜಾತಿವಾದದ ಗಲ್ಲಿಗಳಲ್ಲಿ ಸಿಲುಕಲ್ಲ, ಏಕೆಂದರೆ ಇದು ಅಭಿವೃದ್ಧಿಯ ಹೆದ್ದಾರಿಯಲ್ಲಿ ವೇಗವನ್ನು ಪಡೆದುಕೊಂಡಿದೆ, ಎಂದು ಮಾರ್ಮಿಕವಾಗಿ ನುಡಿದರು.

'ಬಿಜೆಪಿಯಿಂದ ಮಿಷನ್ ಗಂಗೆ, ಅಖಿಲೇಶ್‌ನಿಂದ ಮಿಷನ್ ದಂಗೆ': ಶಿವರಾಜ್‌ ಸಿಂಗ್ ಚೌಹಾಣ್

ಮುಂದುವರಿದು, ಬಲ್ಲಿಯಾ ಜೊತೆ ನನಗೆ ಭಾವನಾತ್ಮಕ ಸಂಬಂಧ ಇದೆ.  ಏಕೆಂದರೆ ಉಚಿತ ಎಲ್ಪಿಜಿ ಸಿಲಿಂಡರ್ ವಿತರಿಸುವ ಉಜ್ಷಲ ಯೋಜನೆ ಆರಂಭಿಸಿದ್ದು ಇಲ್ಲಿಂದಲೇ. ಉತ್ತರ ಪ್ರದೇಶದ ಅಭಿವೃದ್ಧಿ ನನ್ನ ಆದ್ಯತೆ ಹಾಗೂ ಜವಾಬ್ದಾರಿ ಎಂದು ಮೋದಿ ಹೇಳಿದರು. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಇಲ್ಲಿಯ ಯಾವುದೇ ವರ್ತಕನಿಗೆ ತನ್ನ ಹಣ ಕಳವಾಗುವ ಭಯವಿಲ್ಲ ಎಂದು ಮೋದಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೊಂಡಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ 5 ಹಂತದ ಮತದಾನ ಮುಗಿದ್ದಿದ್ದು, ಇನ್ನೆರಡು ಹಂತದ ಮತದಾನ ಬಾಕಿ ಇದೆ. 6ನೇ ಹಂತದ ಮತದಾನ ಮಾರ್ಚ್ 3ಕ್ಕೆ ನಡೆದರೆ, 7ನೇ ಮತ್ತು ಕೊನೆಯ ಹಂತದ ಮತದಾನ ಮಾರ್ಚ್ 7ಕ್ಕೆ ನಡೆಯಲಿದೆ. ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ.