Asianet Suvarna News Asianet Suvarna News

'ಬಿಜೆಪಿಯಿಂದ ಮಿಷನ್ ಗಂಗೆ, ಅಖಿಲೇಶ್‌ನಿಂದ ಮಿಷನ್ ದಂಗೆ': ಶಿವರಾಜ್‌ ಸಿಂಗ್ ಚೌಹಾಣ್

ಉತ್ತರ ಪ್ರದೇಶದಲ್ಲಿ (Uttar Pradesh) 5 ಹಂತದ ಚುನಾವಣೆಗಳು ಮುಗಿದಿವೆ. ಇನ್ನೆರಡು ಹಂತದ ಚುನಾವಣೆ ಬಾಕಿ ಇದೆ. ಕೊನೆಯ ಮೂರು ಹಂತಗಳು ಓಬಿಸಿ ಮತಬ್ಯಾಂಕ್‌ ದೃಷ್ಟಿಯಿಂದ ಭಾರೀ ಮಹತ್ವ ಪಡೆದಿವೆ. ಅದಕ್ಕಾಗಿಯೇ ಎಲ್ಲಾ ರಾಜಕೀಯ ಪಕ್ಷಗಳ ದಿಗ್ಗಜ ನಾಯಕರು  ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ.  

First Published Mar 1, 2022, 3:51 PM IST | Last Updated Mar 1, 2022, 3:56 PM IST

ಲಕ್ನೋ (ಮಾ. 01):  ಉತ್ತರ ಪ್ರದೇಶದಲ್ಲಿ (Uttar Pradesh) 5 ಹಂತದ ಚುನಾವಣೆಗಳು ಮುಗಿದಿವೆ. ಇನ್ನೆರಡು ಹಂತದ ಚುನಾವಣೆ ಬಾಕಿ ಇದೆ. ಕೊನೆಯ ಮೂರು ಹಂತಗಳು ಓಬಿಸಿ ಮತಬ್ಯಾಂಕ್‌ ದೃಷ್ಟಿಯಿಂದ ಭಾರೀ ಮಹತ್ವ ಪಡೆದಿವೆ. ಅದಕ್ಕಾಗಿಯೇ ಎಲ್ಲಾ ರಾಜಕೀಯ ಪಕ್ಷಗಳ ದಿಗ್ಗಜ ನಾಯಕರು  ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ.  

ಉತ್ತರ ಪ್ರದೇಶದಲ್ಲಿ ಇನ್ನೇನಿದ್ದರೂ ಅಭಿವೃದ್ಧಿ, ಜಾತಿವಾದಕ್ಕೆ ಗುಡ್‌ವೈ: ಮೋದಿ

ಜಾನ್‌ಪುರದಲ್ಲಿ ಮಾತನಾಡಿದ ಮಧ್ಯ ಪ್ರದೇಶ ಸಿಎಂ ಶಿವರಾಜ್‌ ಸಿಂಗ್ ಚೌಹಾಣ್  ಅಖಿಲೇಶ್ ಯಾದವ್ ವಿರುದ್ಧ ವೈಯುಕ್ತಿಕ ದಾಳಿ ನಡೆಸಿದ್ದಾರೆ.  'ಉಕ್ರೇನ್‌ನಲ್ಲಿ ಸಿಲುಕಿರುವ  ಭಾರತೀಯರ ರಕ್ಷಣೆಗೆ ನಾವು ಮಿಶನ್ ಗಂಗೆ ಆರಂಭಿಸಿದರೆ, ಅಖಿಲೇಶ್ ಉತ್ತರ ಪ್ರದೇಶದಲ್ಲಿ ಮಿಶನ್ ದಂಗೆ ನಡೆಸಿದ್ದಾರೆ. ಅಖಿಲೇಶ್ ಸಿಎಂ ಆಗಿದ್ದಾಗ 700ಕ್ಕಿಂತಲೂ ಹೆಚ್ಚು ದಂಗೆಗಳಾಗಿವೆ, ಆತ ಅಖಿಲೇಶ್ ಅಲ್ಲ, ಆತ ದಂಗೇಶ್' ಎಂದು ಚೌಹಾಣ್ ಗುಡುಗಿದ್ದಾರೆ

ಗಾಝಿಪುರದಲ್ಲಿ ಪ್ರಚಾರ ಸಭೆಯನ್ನುದ್ದೇಶಿ ಮಾತನಾಡಿದ  ಶಿವರಾಜ್ ಸಿಂಗ್ ಚೌಹಾಣ್, ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್‌ರನ್ನು ಮೊಘಲ್ ದೊರೆ ಔರಂಗಝೇಬ್‌ಗೆ ಹೋಲಿಸಿದ್ದಾರೆ.  ಔರಂಗಝೇಬ್‌ನಂತೆ ಅಪ್ಪನನ್ನು ಮೂಲೆಗುಂಪಾಗಿಸಿ ಅಧಿಕಾರವನ್ನು ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.