Asianet Suvarna News Asianet Suvarna News

ದುಬಾರಿಯಾಯ್ತು ಕೋವಿಡ್ ಔಷಧಗಳ ಬೆಲೆ; ಒಂದೇ ತಿಂಗಳಲ್ಲಿ ಶೇ. 300 ರಷ್ಟು ಜಾಸ್ತಿ.!

ಕೊರೊನಾ 2 ನೇ ಅಲೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಸೋಂಕಿತರು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಮಾನವೀಯತೆ, ಹೃದಯ ವೈಶಾಲ್ಯತೆ ಮೆರೆಯಬೇಕಿದ್ದ ವೈದ್ಯ ಜಗತ್ತು, ಜನರ ಪ್ರಾಣ ಹಿಂಡುತ್ತಿದೆ. 

ಬೆಂಗಳೂರು (ಮೇ. 01): ಕೊರೊನಾ 2 ನೇ ಅಲೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಕೊರೊನಾ ಸೋಂಕಿತರು ಸಾವು- ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಮಾನವೀಯತೆ, ಹೃದಯ ವೈಶಾಲ್ಯತೆ ಮೆರೆಯಬೇಕಿದ್ದ ವೈದ್ಯ ಜಗತ್ತು, ಜನರ ಪ್ರಾಣ ಹಿಂಡುತ್ತಿದೆ.

ಕೊರೊನಾ ವೈರಸ್‌ಗಿಂತ ಡೇಂಜರ್ ಕೊರೊನಾ ವೈರಲ್ ಸುದ್ದಿಗಳು..!

ಕೊರೊನಾ ದಿನದಿಂದ ದಿನಕ್ಕೆ ಸಾಯಿಸುತ್ತಿದ್ದರೆ, ಅದನ್ನೂ ಮೀರಿಸುವಂತೆ ಕೊರೊನಾ ಔಷಧ, ಉಪಕರಣಗಳು ಜನರನ್ನು ಸಾಯಿಸುತ್ತಿವೆ. ಒಂದೇ ತಿಂಗಳಿನಲ್ಲಿ ಔಷಧ ಉಪಕರಣಗಳು ಶೇ. 300 ರಷ್ಟು ಹೆಚ್ಚಾಗಿದೆ. ಜನರ ಅಸಹಾಯಕ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ಸುಲಿಗೆಗಿಳಿದಿದೆ ವೈದ್ಯ ಜಗತ್ತು. ಇದ್ದಕ್ಕಿದ್ದಂತೆ ಬೆಲೆ ದುಬಾರಿಯಾಗಲು ಕಾರಣವೇನು..?