Asianet Suvarna News Asianet Suvarna News

UP Elections 2022: ರಾಜಕೀಯ ತಲ್ಲಣದ ಹಿಂದೆ ಯಾರೂ ಅರಿಯದ ಸಿಕ್ರೇಟ್‌: ಶಾಸಕರ ಪಕ್ಷಾಂತರ ಯೋಗಿಗೆ ವರ!?

*ಮುಂದುವರೆದ  ಬಿಜೆಪಿ  ನಾಯಕರ ರಾಜೀನಾಮೆ 
*ಕಮಲ ಪಡೆಯಿಂದ ಆಚೆ ಬಂದ ಕೇಸರಿ ಕಲಿಗಳು
*ಮೋದಿ-ಯೋಗಿ ಪ್ಲ್ಯಾನ್‌ ಏನು ಗೊತ್ತಾ?
*ರಾಜಕೀಯ ತಲ್ಲಣದ ಹಿಂದೆ ಅಡಗಿದೆ ಸಿಕ್ರೇಟ್‌
*ಶಾಸಕರ ಪಕ್ಷಾಂತರ ಯೋಗಿಗೆ ವರ!?

ಉತ್ತರ ಪ್ರದೇಶ (ಜ. 14): ಯುಪಿ ಚುನಾವಣೆಗೆ (UP Assembly Elections 2022)  ಸುಮಾರು ಒಂದು ತಿಂಗಳ ಮೊದಲು, ಆಡಳಿತ ಪಕ್ಷ ಬಿಜೆಪಿ  ನಾಯಕರು  (BJP Leaders) ರಾಜೀನಾಮೆ ನೀಡುವುದು ನಿಲ್ಲುತ್ತಿಲ್ಲ. ಮಂಗಳವಾರ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ ನಂತರ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಮೌರ್ಯ ಸೇರಿದಂತೆ ಮೂವರು ಸಚಿವರು ಮತ್ತು ಏಳು ಶಾಸಕರು ಬಿಜೆಪಿ ತೊರೆದಿದ್ದಾರೆ. ಉತ್ತರ ಪ್ರದೇಶ ಸರ್ಕಾರಕ್ಕೆ ರಾಜೀನಾಮೆ ನೀಡಿರುವ ಧರಂ ಸಿಂಗ್ ಸೈನಿ ಅವರು ಜನವರಿ 20 ರವರೆಗೆ ಪ್ರತಿದಿನ ಒಬ್ಬ ಸಚಿವರು ಮತ್ತು 3 ರಿಂದ 4 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರ ಮಾರ್ಗವನ್ನು ಅನುಸರಿಸುವುದಾಗಿ ಸೈನಿ ಹೇಳಿದ್ದಾರೆ.

ಇದನ್ನೂ ಓದಿ: UP Election 2022 ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾರ ಜೊತೆಗೆ ಮೈತ್ರಿ ಇಲ್ಲ, ಶಿವಸೇನೆ ಸ್ಪಷ್ಟನೆ!

ಈ ಮಧ್ಯೆ ಏನಾದ್ರೂ ಸರಿ ಈಗಿರುವ ಪಟ್ಟವನ್ನು ಉಳಿಸಕೊಳ್ಳಬೇಕೆಂದು ಬಿಜೆಪಿ ಸಿದ್ಧತೆ ನಡೆಸಿದೆ. ಶತಾಯಗತಾಯ ತನ್ನ ನೆಲೆ ಮರುಸ್ಥಾಪಿಸಬೇಕೆಂದು ಎಸ್‌ಪಿ (SP) ಪಣತೊಟ್ಟಿದೆ.ಇತ್ತ ಬಿಎಸ್‌ಪಿ (BSP), ಕಾಂಗ್ರೆಸ್ (Congress) ಕೂಡ ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿವೆ. ಈ ಮಧ್ಯೆ ಕಮಲ ಪಾಳಯದಲ್ಲಿ ಮಾತ್ರ ಯಾರೂ ಊಹಿಸಿರದ ಘಟನೆಯೊಂದು ನಡೆದಿದೆ. ಇದು ಬಿಜೆಪಿಗೆ ಆಘಾತವೋ? ಅದೃಷ್ಟವೋ? ಅಗ್ನಿ ಪರೀಕ್ಷೆಯೋ? ವಿಡಿಯೋದಲ್ಲಿದೆ ಕಂಪ್ಲೀಟ್‌ ಮಾಹಿತಿ.

Video Top Stories