Asianet Suvarna News Asianet Suvarna News

ಕೇಂದ್ರ ಸಂಪುಟ ಶೀಘ್ರ ಪುನಾರಚನೆ?

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಸದಸ್ಯರಿಗೆ ಅವರ ಸಚಿವಾಲಯದ ವತಿಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ವಿಸ್ತೃತ ವರದಿಯನ್ನು ಡಿ.21ರಂದು ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಮೋದಿ ತಮ್ಮ ಸಂಪುಟವನ್ನು ಶೀಘ್ರದಲ್ಲೇ ಪುನಾರಚನೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ನವದೆಹಲಿ[ಡಿ.16]: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಸದಸ್ಯರಿಗೆ ಅವರ ಸಚಿವಾಲಯದ ವತಿಯಿಂದ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ವಿಸ್ತೃತ ವರದಿಯನ್ನು ಡಿ.21ರಂದು ಸಲ್ಲಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಮೋದಿ ತಮ್ಮ ಸಂಪುಟವನ್ನು ಶೀಘ್ರದಲ್ಲೇ ಪುನಾರಚನೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರದ ಮೊದಲ ಸಂಪುಟ ಪುನರ್‌ ರಚನೆ ಇದಾಗಲಿದೆ. ಈ ವೇಳೆ ಉತ್ತಮ ಪ್ರದರ್ಶನ ತೋರದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ.

ರಾಜಕೀಯ ನಿವೃತ್ತಿ ಘೋಷಿಸಿದ ಮತ್ತೊಬ್ಬ ಕೇಂದ್ರ ಸಚಿವ!

ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಚಿವರ ಮೌಲ್ಯ ಮಾಪನ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ, ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಭೆಯಲ್ಲಿ ಸಚಿವರಿಂದ ನಿರೀಕ್ಷಿತ ಯೋಜನೆಗಳ ಬಗ್ಗೆ ಮೋದಿ ಅವರು ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.