ಜಗತ್ತನ್ನೇ ಕಂಗೆಡಿಸಿದೆ ಆ ಭಯಾನಕ ಸಂಗತಿ: ಹೆಚ್ಚಾಗುತ್ತಲೇ ಇದೆ ಏಕೆ ಪ್ರಳಯ ಭೀತಿ..?
ದಿನದಿನಕ್ಕೂ ಸಮೀಪಿಸುತ್ತಿದೆಯಾ ಪ್ರಳಯದ ದಿನ..?
ಯಾವುದರಿಂದ ಉಂಟಾಗಲಿದೆ ಜಗತ್ತಿನ ಅಂತ್ಯ..?
ಇನ್ನು 3 ವರ್ಷಗಳಲ್ಲಿ ಸಂಭವಿಸಲಿದೆ 4 ಗ್ರಹಣ!
ಜಗತ್ತಿನ ಯಾವ್ದೋ ಮೂಲೇಲಿ, ಎಲ್ಲೋ ಒಂದ್ ಕಡೆ ಆಗಬಾರದ್ದ ಅನಾಹುತ ಒಂದು ಆಗ್ತಲೇ ಇರುತ್ತೆ. ಈಗಾಗಲೇ ಜಗತ್ತು ನಾನಾ ರೀತಿಯ ಅತಿ ಭಯಾನಕ ಸನ್ನಿವೇಶಗಳನ್ನ ನೋಡಿದೆ. ಅದ್ರಲ್ಲೂ ಕಳೆದ 10-15 ವರ್ಷಗಳಲ್ಲಿ, ಏನೇನು ಆಗಬಾರದ ದುರಂತಗಳಿದ್ದವೋ ಅವೆಲ್ಲವೂ ಆಗಿಹೋಗಿವೆ. ಇತ್ತೀಚಿಗೆ ಒಂದು ಸಂಗತಿ ಗಮನಿಸಿದ್ದೀರಾ..? ಬರೀ ಭಾರತ ಮಾತ್ರವೇ ಅಲ್ಲ.. ಜಗತ್ತಿನ ನಾನಾ ದೇಶಗಳಲ್ಲಿ, ನಾನಾ ಭಾಗಗಳಲ್ಲಿ, ಒಂದರ ಹಿಂದೊಂದು ಅನಾಹುತಗಳು ಆಗ್ತಲೇ ಇದಾವೆ.. ಅದರಲ್ಲೂ ಮಳೆ(rain) ಸುರಿಯೋಕೆ ಆರಂಭವಾದ್ರೆ ಸಾಕು, ದೊಡ್ಡ ದೊಡ್ಡ ದೇಶಗಳ ನೂರಾರು ನಗರಗಳು, ಜಲವ್ಯೂಹಕ್ಕೆ ಸಿಲುಕಿ ಛಿದ್ರವಾಗ್ತಿದ್ದಾವೆ. ಭಾರತ(India), ಅಮೆರಿಕಾ, ಜಪಾನ್, ಚೀನಾ, ಸ್ವಿಡನ್ ಹಾಗೂ ಥೈಲ್ಯಾಂಡ್ ಸೇರಿದಂತೆ ಕನಿಷ್ಟ 15 ದೇಶಗಳಲ್ಲಿ ಬರೀ ಈ ಒಂದು ವರ್ಷದಲ್ಲೇ, ಸಾವಿರಾರು ಕೋಟಿಯಷ್ಟು ನಷ್ಟ ಉಂಟು ಮಾಡಿದೆ ಈ ಜಲಪ್ರಹಾರ. ಇಷ್ಟು ಸಾಲದು ಅಂತ, ಜನರ ಜೀವವನ್ನೂ ತೆಗೆದುಬಿಡುತ್ತೆ, ಈ ಜಲಪ್ರವಾಹದ ಯಮಪ್ರಹಾರ. ಇತ್ತೀಚಿಗೆ ಜಗತ್ತಿನಾದ್ಯಂತ ಏನಾಗ್ತಿದೆ ಅಂದ್ರೆ, ತಿಂಗಳುಗಟ್ಟಲೆ ಸುರೀಬೇಕಿದ್ದ ಮಳೆ, ಕೆಲವೇ ಗಂಟೆಗಳಲ್ಲೇ ಸುರಿದುಬಿಡುತ್ತೆ. ಅಂಥದ್ದೇ ಘಟನೆ, ಕಳೆದ ತಿಂಗಳು ಮುಂಬೈ ಹಾಗೂ ಗುಜರಾತಿನಲ್ಲಾಗಿತ್ತು.
ಇದನ್ನೂ ವೀಕ್ಷಿಸಿ: ನಟ ನಾನಿ ಹೇಳಿದ ಪ್ಯಾನ್ ಇಂಡಿಯಾ ಹೀರೋ ಯಾರು ಗೊತ್ತಾ..?