ನಟ ನಾನಿ ಹೇಳಿದ ಪ್ಯಾನ್ ಇಂಡಿಯಾ ಹೀರೋ ಯಾರು ಗೊತ್ತಾ..?
ದುಲ್ಕರ್‌ಗೆ ತಮಿಳು, ತೆಲುಗು, ಮಲೆಯಾಳಂ ಎಲ್ಲಾ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಸಿನಿಮಾ ಮಾಡೋಕೆ ಮುಂದೆ ಬರೋದ್ರಿಂದ ಇವರು ಪ್ಯಾನ್ ಇಂಡಿಯಾ ಹೀರೋ ಎಂದು ನಾನಿ ಹೇಳಿದ್ದಾರೆ.
ಈಗ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಹೀರೋಗಳ(pan India hero) ಸದ್ದು ಹೆಚ್ಚಾಗಿದೆ. ಯಶ್ ಪ್ರಭಾಸ್, ರಿಷಬ್, ಸುದೀಪ್, ಅಲ್ಲು ಅರ್ಜುನ್ ಸೇರಿದಂತೆ ಹಲವು ಸ್ಟಾರ್ಸ್ ಪ್ಯಾನ್ ಇಂಡಿಯಾ ಹೀರೋ ಕಾಂಪಿಟೇಷನ್‌ಗೆ ಬಿದ್ದಿದ್ದಾರೆ. ಆದ್ರೆ ಕಾಲಿವುಡ್ ನಟ ನಾನಿ(actor Nani) ಈಗ ಪ್ಯಾನ್ ಇಂಡಿಯಾ ಹೀರೋ ಅಂದ್ರೆ ಯಾರು ಅಂತ ಹೇಳಿದ್ದಾರೆ. ನಟ ದುಲ್ಕರ್(Dulquer Salmaan) ಪ್ಯಾನ್ ಇಂಡಿಯಾ ಹೀರೋ ಎಂದು ನಾನಿ ಹೇಳಿದ್ದಾರೆ. ಯಾಕಂದ್ರೆ ದುಲ್ಕರ್‌ಗೆ ತಮಿಳು, ತೆಲುಗು, ಮಲೆಯಾಳಂ ಎಲ್ಲಾ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಸಿನಿಮಾ ಮಾಡೋಕೆ ಮುಂದೆ ಬರ್ತಿದ್ದಾರಂತೆ. ಹಾಗಾಗಿ ನಟ ದುಲ್ಕರ್ ಪ್ಯಾನ್ ಇಂಡಿಯಾ ನಟ ಎಂದು ನಾನಿ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಆರು ತಿಂಗಳ ಆಟ..ಯಾರು ಆಟಗಾರ..?ಯಾರು ಸೂತ್ರಧಾರ..? ರಾಜ್ಯದಲ್ಲೂ ನಡೆಯಲಿದ್ಯಾ 'ಮಹಾ'ಚದುರಂಗದಾಟ..?