ಕರ್ನಾಟಕದಲ್ಲಿ ಮೋದಿ ಪಾಪ್ಯುಲರಾ..? ರಾಹುಲ್ ಗಾಂಧಿ ಫೇಮಸ್ಸಾ..? ಮೆಗಾ ಸಮೀಕ್ಷೆಯಲ್ಲಿ ಹೊರ ಬಿತ್ತು ಸೀಕ್ರೆಟ್..!
ಪ್ರಧಾನಿ ಪಟ್ಟದ ರೇಸ್.. ಯಾರು ಫಸ್ಟ್.. ಯಾರು ಬೆಸ್ಟ್..?
ಎಬಿಪಿ+ಸಿ ವೋಟರ್ ಸಮೀಕ್ಷೆಯಲ್ಲಿ ಮೋದಿಗೆ ಬಹುಪರಾಕ್..!
ರಾಹುಲ್ ಗಾಂಧಿಗಿಂತ ಮೋದಿಯೇ ಬೆಸ್ಟ್ ಅಂದ ದೇಶವಾಸಿಗಳು!
ಇನ್ನೈದು ತಿಂಗಳಲ್ಲಿ ಲೋಕಸಭಾ ಚುನಾವಣೆ. ಪ್ರಧಾನಿ ಮೋದಿಯವರಿಗೆ(Narendra modi) ಹ್ಯಾಟ್ರಿಕ್ ಗುರಿಯಾದ್ರೆ, ಮೋದಿ ದಿಗ್ವಿಜಯಕ್ಕೆ ಬ್ರೇಕ್ ಹಾಕೋದೇ ವಿರೋಧ ಪಕ್ಷಗಳ ಪರಮಗುರಿ. 2014 ಮತ್ತು 2019ರಲ್ಲಿ ದೇಶವೇ ತಿರುಗಿ ನೋಡುವಂತೆ ಗೆದ್ದು ಪ್ರಧಾನಿಯಾಗಿರೋ ಮೋದಿ, 2024ರಲ್ಲಿ ಹ್ಯಾಟ್ರಿಕ್ ಬಾರಿಸ್ತಾರಾ..? ಗುಜರಾತ್'ನ(Gujarat) ಗಜಕೇಸರಿ ಮೋದಿ ಸತತ ಮೂರನೇ ಬಾರಿ ಪ್ರಧಾನಿಯಾಗ್ತಾರಾ..? ಮೋದಿ ಹ್ಯಾಟ್ರಿಕ್ ಹೀರೋ ಆಗೋದು ಗ್ಯಾರಂಟಿನಾ..? ಇದು ದೇಶವಾಸಿಗಳ ಕುತೂಹಲದ ಪ್ರಶ್ನೆ. ಜನರನ್ನು ಕೇಳಿದ್ರೆ ಬಹುತೇಕರು ಹೇಳ್ತಾರೆ ಮೋದಿ ಹ್ಯಾಟ್ರಿಕನ್ನು ತಡೆಯಲು ಯಾರಿಂದ್ಲೂ ಸಾಧ್ಯ ಇಲ್ಲ ಅಂತ. ಲೋಕಸಭಾ ಚುನಾವಣೆಯಲ್ಲಿ(Loksabha election) ಬಿಜೆಪಿ(BJP) ಗೆಲುವು ಶತಸಿದ್ಧ ಅಂತ ಒಂದಷ್ಟು ಸಮೀಕ್ಷೆಗಳೂ ಹೇಳ್ತಾ ಇವೆ. ಬಿಜೆಪಿ ಗೆದ್ರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗೋದೂ ಅಷ್ಟೇ ಸತ್ಯ. ಆದ್ರೆ ಇದನ್ನು ತಡೆಯಲು ವಿರೋಧ ಪಕ್ಷಗಳು ಇಂಡಿಯಾ ಮೈತ್ರಿಕೂಟ ರಚಿಸಿ ಮೋದಿ ಕನಸನ್ನು ಭಗ್ನ ಮಾಡಲು ಹೊರಟಿವೆ. ಇದ್ರ ಮಧ್ಯೆ ಸಮೀಕ್ಷೆಯೊಂದು ಹೊರ ಬಿದ್ದಿದ್ದು, ಪ್ರಧಾನಿ ಪಟ್ಟಕ್ಕೆ ಯಾರು ಸೂಕ್ತ ಅನ್ನೋ ಪ್ರಶ್ನೆಗೆ ಆ ಸಮೀಕ್ಷೆಯಲ್ಲಿ ಉತ್ತರ ಸಿಕ್ಕಿದೆ. ಲೋಕಸಭಾ ಚುನಾವಣೆಗಿನ್ನು ಬೆರಳೆಣಿಕೆಯ ತಿಂಗಳುಗಳಷ್ಟೇ ಬಾಕಿ. ಈ ಚುನಾವಣೆ ನಡೆಯಲಿರೋದು ಎರಡು ಪ್ರಮುಖ ಮೈತ್ರಿಕೂಟಗಳ ಮಧ್ಯೆ. ಒಂದು NDA, ಮತ್ತೊಂದು INDIA. ಎನ್.ಡಿ.ಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋದು ಎಲ್ರಿಗೂ ಗೊತ್ತು. ಅಲ್ಲಿರೋದು ಒಂದೇ ಸಿಂಗಲ್ ಸಿಂಹ. ಅವ್ರೇ ಗಜಕೇಸರಿ ನರೇಂದ್ರ ಮೋದಿ. ಆದ್ರೆ INDIA ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ಈ ಕ್ಷಣದವರೆಗೆ ಉತ್ತರ ಸಿಕ್ಕಿಲ್ಲ. INDIA ಮೈತ್ರಿಕೂಟದ ಭಾಗವಾಗಿರೋ 26 ಪಕ್ಷಗಳು ಇಲ್ಲಿವರೆಗೆ 4 ಬಾರಿ ಸಭೆ ಸೇರಿದ್ರೂ, ಪ್ರಧಾನ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
ಇದನ್ನೂ ವೀಕ್ಷಿಸಿ: ಖಲಿಸ್ತಾನಿ ಉಗ್ರ ಮುಸ್ಲಿಮರಿಗೆ ಹೇಳಿದ್ದೇನು..? ಅಯೋಧ್ಯೆಗೂ.. ಸಿಖ್ಖರಿಗೂ ಇರೋ ನಂಟಿನ ಕತೆ ಏನು..?