ಶ್ರೀಕೃಷ್ಣ ಜಯಂತಿ : ಕೃಷ್ಣನ ವೇಷದಲ್ಲಿ ಮಿಂಚಿದ ವಿಶೇಷಚೇತನ ಮುಸ್ಲಿಂ ಬಾಲಕ !

ವಿಶೇಷಚೇತನ ಮುಸ್ಲಿಂ ಬಾಲಕನೊಬ್ಬ ಕೃಷ್ಣಾ ಜನ್ಮಾಷ್ಟಮಿಗೆ ಕೃಷ್ಣನ ವೇಷ ಧರಿಸಿರುವ ಅಪರೂಪದ ಘಟನೆ ಕೇರಳದಲ್ಲಿ ನಡೆದಿದೆ.
 

First Published Sep 7, 2023, 3:41 PM IST | Last Updated Sep 7, 2023, 3:45 PM IST

ಕೋಝಿಕ್ಕೋಡ್: ಕೇರಳದಲ್ಲಿ ಬುಧವಾರ ಶ್ರೀಕೃಷ್ಣ ಜಯಂತಿಯನ್ನು(Krishna Jayanti) ಅದ್ಧೂರಿಯಾಗಿ ಆಚರಿಸಲಾಯಿತು. ಜನ್ಮಾಷ್ಟಮಿ ಹಿನ್ನೆಲೆ ಶೋಭಾ ಯಾತ್ರೆಯನ್ನು ಆಯೋಜಿಸಿದ್ದು, ಇದರಲ್ಲಿ ಹಲವಾರು ಪುಟ್ಟ- ಪುಟ್ಟ ಮಕ್ಕಳು ಕೃಷ್ಣ, ಗೋಪಿಕರಂತೆ ಸುಂದರವಾಗಿ ಡ್ರೆಸ್‌ (Dress)ಮಾಡಿಕೊಂಡು ಬಂದಿದ್ದರು. ಬಾಲಗೋಕುಲಂ ಜಿಲ್ಲಾ ಘಟಕದ ವತಿಯಿಂದ ಶೋಭಾ ಯಾತ್ರೆ(Shobha Yatra) ನಡೆಯಿತು. ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಕ್ಕಳ ನಡುವೆ ಶ್ರೀಕೃಷ್ಣನ ವೇಷಧಾರಿ ಮುಹಮ್ಮದ್ ಯಾಹಿಯಾನ್ (8) ಎಂಬ ಮುಸ್ಲಿಂ ಬಾಲಕನ(Muslim boy) ಭಾಗವಹಿಸುವಿಕೆ ಎಲ್ಲರ ಗಮನ ಸೆಳೆಯಿತು. ಗಾಲಿಕುರ್ಚಿಯಲ್ಲಿ ಯಾಹಿಯಾನ್ ಕೃಷ್ಣನ ವೇಷ ಧರಿಸಿ ಬಂದಿದ್ದ. ನನ್ನ ಮಗ ಶ್ರೀಕೃಷ್ಣನ ವೇಷಭೂಷಣ ಹಾಕಲು ಮತ್ತು ಮೆರವಣಿಗೆಯಲ್ಲಿ ಭಾಗವಹಿಸುವ ಆಸೆಯನ್ನು ಹೊಂದಿದ್ದ. ನಾವು ಅವನ ಸಂತೋಷಕ್ಕಾಗಿ ಈ ವೇಷವನ್ನು ಹಾಕಿದ್ದೇವೆ. ನಾವು ಮೊದಲ ಬಾರಿಗೆ ಈ ಮೆರವಣಿಗೆಯಲ್ಲಿ ಭಾಗಿವಹಿಸಿದ್ದೇವೆ ಎಂದು ಯಾಹಿಯಾನ್‌ ತಾಯಿ ರೂಬಿಯಾ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಛತ್ರಿ ಹಿಡಿದು ಪಾಠ ಕೇಳ್ತಿದ್ದಾರೆ ಸ್ಟೂಡೆಂಟ್ಸ್: ಇದೇನು ಕಾಲೇಜಾ ? ಬಚ್ಚಲು ಮನೆನಾ ?