ಛತ್ರಿ ಹಿಡಿದು ಪಾಠ ಕೇಳ್ತಿದ್ದಾರೆ ಸ್ಟೂಡೆಂಟ್ಸ್: ಇದೇನು ಕಾಲೇಜಾ ? ಬಚ್ಚಲು ಮನೆನಾ ?
ಅಂಥದೊಂದು ದೃಶ್ಯ ನೀವು ಈವರೆಗೂ ನೋಡಿಲ್ಲ, ಮುಂದೆಯೂ ನೋಡಲ್ಲ. ಅದೊಂದು ದೃಶ್ಯ ನೋಡಿದ್ರೆ ಹೌಹಾರಿ ಹೋಗ್ತೀರಾ. ಎಲ್ಲೂ ಇಲ್ಲದ ಆ ದೃಶ್ಯ ನಮ್ಮ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೇಗೆ? ಅಷ್ಟಕ್ಕೂ ಆ ದೃಶ್ಯ ಯಾವ ಜಿಲ್ಲೆಯದ್ದು ಗೊತ್ತಾ? ಇಲ್ಲಿದೆ ನೋಡಿದೆ ಆ ಸ್ಪೆಷಲ್ ರಿಪೋರ್ಟ್.
ಯೆಸ್ ಆ ಕಾಲೇಜು ವಿದ್ಯಾರ್ಥಿನಿಯರು, ಶ್ರಿಮಂತ ಮಕ್ಕಳಲ್ಲ , ಅವರು ಬಡವರ ಮಕ್ಕಳು. ಗ್ರಾಮೀಣ ಭಾಗದ ಶಾಲಾ ಮಕ್ಕಳು ಅಂದ್ರೆ ಅಷ್ಟೊಂದು ಕೀಳಾಗಿ ನೋಡಿಕೊಳ್ಳೋದಾ..? ಅದರಲ್ಲೂ ಅವರು ಶಾಲಾ ಮಕ್ಕಳಲ್ಲ ಡಿಗ್ರಿ ಕಾಲೇಜಿನ ಹೆಣ್ಣು ಮಕ್ಕಳು. ಅವರಿಗೆಲ್ಲ ಸದ್ಯ ಓದಲು ಸೂರಿಲ್ಲದೆ ದಿನನಿತ್ಯ ಸೋರುತ್ತಿರುವ ಕಾಲೇಜಿನಲ್ಲಿ ಛತ್ರಿ ಹಿಡಿದುಕ್ಕೊಂಡು ಅಧ್ಯಯನ ಮಾಡುವ ಪರಿಸ್ಥಿತಿ ಎದುರಾಗಿದೆ. ಹೀಗೆ ಛತ್ರಿ ಹಿಡಿದುಕೊಂಡು ಪಾಠ ಕೇಳುತ್ತಿರುವ ಕಾಲೇಜು ವಿದ್ಯಾರ್ಥಿನಿಯರು, ಇನ್ನೊಂದಡೆ ಚತ್ರಿ ಹಿಡಿದುಕೊಂಡು ವಿದ್ಯಾರ್ಥಿನಿಯರಿಗೆ ಪಾಠ ಮಾಡ್ತಿರುವ ಶಿಕ್ಷಕರು. ಮತ್ತೊಂದಡೆ ಇಡೀ ಕಾಲೇಜು ಕಟ್ಟಡ(College Building) ಸೋರುತ್ತಿದೆ, ಯಾವಾಗ ಕಟ್ಟಡ ಬೀಳುತ್ತೆ ಎಂಬ ಭಯದಲ್ಲಿ ಅಭ್ಯಾಸ ಮಾಡ್ತಿರುವ ವಿದ್ಯಾರ್ಥಿನಿಯರು. ಈ ದೃಶ್ಯ ಕಂಡು ಬಂದಿದ್ದು ಶಾಸಕ ಅರವಿಂದ ಬೆಲ್ಲದ್ (Arvinda Bellad) ಅವರ ಕ್ಷೇತ್ರ ಧಾರವಾಡ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ.
ಇನ್ನು ಈ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಹೋಮ್ ಸೈನ್ಸ್, ಸೇರಿದಂತೆ 350ಕ್ಕೂ ಹೆಚ್ಚು ವಿದ್ಯಾರ್ಥಿನಿಯರು(Students) ಅಧ್ಯಯನ ಮಾಡುತ್ತಿದ್ದಾರೆ. ಆದರೆ ಇಡೀ ಕಾಲೇಜು ಕಟ್ಟಡ ಸೋರುತ್ತಿದೆ. ಆದರೆ ಸರ್ಕಾರಿ ಕಾಲೇಜಿನ ಮಕ್ಕಳ ಗೋಳು ಕೇಳೋರಿಲ್ಲ. ಇತ್ತ ವಿದ್ಯಾರ್ಥಿಗಳು ನಮಗೆ ಫ್ರೀ ಬಸ್ ಬೇಡ, ಯಾವ ವಿದ್ಯಾನಿಧಿಯೂ ಬೇಡ ನಮಗೆ ಕಾಲೇಜು ಕಟ್ಟಿಕೊಂಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಸದ್ಯ ಲೋಕೋಪಯೋಗಿ ಇಲಾಖೆಯಿಂದ 2 ಕೋಟಿ 42 ಲಕ್ಷ ರೂಪಾಯಿ ವೆಚ್ಚದಲ್ಲಿ ಹೊಸ ಕೊಠಡಿಗಳಿಗೆ ಸದ್ಯ ಜನವರಿ ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. 15 ಕೊಠಡಿಗಳ ಅಂದಾಜು ವೆಚ್ಚದ ಪ್ರಕಾರ ಸರಕಾರದಿಂದ ಹಣ ಬಿಡುಗಡೆ ಯಾದ್ರೆ ಸಾಕು ಈ ಕಾಲೇಜು ವಿದ್ಯಾರ್ಥಿಗಳಿಗೆ ಶಾಶ್ವತವಾಗಿ ಕೊಠಡಿಗಳು ಸಿಕ್ಕಂತಾಗುತ್ತದೆ..ಆದಷ್ಟು ಬೇಗ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಸಚಿವರು ಮನಸ್ಸು ಮಾಡಿ ಕೊಠಡಿಗಳನ್ನ ಕಟ್ಟಿ ಕೊಡಬೇಕಾಗಿದೆ.
ಇದನ್ನೂ ವೀಕ್ಷಿಸಿ: ಶತಮಾನಕ್ಕೊಬ್ಬರೆ ಹಾಸ್ಯ ಚಕ್ರವರ್ತಿ - ಕನ್ನಡದ ಚಾರ್ಲಿ ಚಾಪ್ಲಿನ್ ನರಸಿಂಹರಾಜು ಕುರಿತು ನಿಮಗೆಷ್ಟು ಗೊತ್ತು?