ಮುಸ್ಲಿಂ ಮಹಿಳೆಯರ ಜೊತೆ ರಕ್ಷಾ ಬಂಧನಕ್ಕೆ ಮೋದಿ ಕರೆ: NDA ಸಂಸದರಿಗೆ ಸಬ್ಕಾ ಸಾಥ್ ಪಾಠ ಮಾಡಿದ ಮೋದಿ !

ಲೋಕಸಭಾ ಚುನಾವಣೆಗೆ ಮೋದಿ ಸಿದ್ಧತೆ ಏನು..?
NDA ಸಭೆಯಲ್ಲಿ ಪ್ಲ್ಯಾನ್ ರಿವೀಲ್ ಮಾಡಿದ ಮೋದಿ 
ಮುಸ್ಲಿಂ ಮಹಿಳೆಯರೊಟ್ಟಿಗೆ ರಾಖಿ ಹಬ್ಬ ಆಚರಿಸಿ

First Published Aug 7, 2023, 3:12 PM IST | Last Updated Aug 7, 2023, 3:12 PM IST

ಪ್ರಧಾನಿ ನರೇಂದ್ರ ಮೋದಿ 2024 ಲೋಕಸಭಾ ಚುನಾವಣೆಗೆ (Lok Sabha election) ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಈ ಪ್ಲಾನ್ ಮೂಲಕ ಎಲ್ಲ ವರ್ಗದವರನ್ನು, ಬಿಜೆಪಿ(BJP) ಪಕ್ಷ ತಲುಪಬೇಕೆಂದ ಮುಖ್ಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಪ್ರಮುಖವಾಗಿ, ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಮತ್ತಷ್ಟು ಹತ್ತಿರವಾಗುವಂತ ಪ್ಲಾನ್ವೊಂದನ್ನು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಮಾಡಿದ್ದಾರೆ. 2024ರಲ್ಲಿ ಲೋಕಸಭಾ ಚುನಾವಣೆ(Loksabha Election) ಬರಲಿದೆ. ಸದ್ಯಕ್ಕೆ ಎಲ್ಲ ರಾಷ್ಟ್ರೀಯ ಪಕ್ಷಗಳು ಮುಂದಿನ ವರ್ಷದ ಚುಣಾವಣೆ ಮೇಲೆ ಕಣ್ಣಿಟ್ಟಿವೆ. ಕಳೆದ ಒಂದು ತಿಂಗಳಿನಿಂದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು, ಚುನಾವಣೆ ಗೆಲ್ಲುವ ತಂತ್ರಗಳನ್ನು ಮಾಡುತ್ತಿವೆ. ಪ್ರಮುಖವಾಗಿ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳಲ್ಲಿ ಎರಡು ಬಣಗಳಾಗಿ ಹುಟ್ಟಿಕೊಂಡಿವೆ. ಆ ಎರಡು ಬಣಗಳ ಹೆಸರು  NDA ಮತ್ತು I.N.D.I.A ಎಂದು. I.N.D.I.Aನಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನೊಂದಿಗೆ 25 ಪ್ರಾದೇಶಿಕ ಪಕ್ಷಗಳು ಸೇರಿಕೊಂಡಿವೆ. ಹಾಗೆನೇ NDA ಜೊತೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪಕ್ಷದ ಜೊತೆ ಒಟ್ಟು 37 ಪ್ರಾದೇಶಿಕ ಪಕ್ಷಗಳು ಸೇರಿಕೊಂಡಿವೆ. ಸೋ ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ NDA ಮತ್ತು I.N.D.I.A ಒಕ್ಕೂಟದ ನಡುವೆ ಬಿಗ್ ಫೈಟ್ ನಡೆಯಲಿದೆ.

ಇದನ್ನೂ ವೀಕ್ಷಿಸಿ:  ಆಗಾಗ ಸದ್ದು ಮಾಡೋದೇಕೆ ನೈಸ್ ವಿವಾದ ?: ಮೋದಿ ತನಕ ಹೋಗುತ್ತಾ NICE ಗಲಾಟೆ..?