Asianet Suvarna News Asianet Suvarna News

Bipin Rawat Chopper Crash: ಹೆಲಿಕಾಪ್ಟರ್ ದುರಂತದ ಕೊನೇ ಕ್ಷಣದ ವಿಡಿಯೋ ವೈರಲ್!

ತಮಿಳುನಾಡಿನ ಕೂನೂರಿನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನವಾಗಿದ್ದು, ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13  ಮಂದಿ ಮೃತಪಟ್ಟಿದ್ದಾರೆ. ಸದ್ಯ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನಕ್ಕೂ ಮುನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲಾದ ಕೊನೇ ಕ್ಷಣದ ವಿಡಿಯೋ ಒಂದು ವೈರಲ್ ಆಗಿದೆ.

ವೆಲ್ಲಿಂಗ್ಟನ್(ಡಿ.09): ತಮಿಳುನಾಡಿನ (Tamil nadu) ಕೂನೂರಿನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನವಾಗಿದ್ದು (IAF Helicopter Crash), ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ (CDS Bipin Rawat)ಸೇರಿದಂತೆ 13  ಮಂದಿ ಮೃತಪಟ್ಟಿದ್ದಾರೆ. ಸದ್ಯ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನಕ್ಕೂ ಮುನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲಾದ ಕೊನೇ ಕ್ಷಣದ ವಿಡಿಯೋ ಒಂದು ವೈರಲ್ ಆಗಿದೆ.

ಹೌದು ನೀಲಗಿರಿ ಅರಣ್ಯದಲ್ಲಿ (Nilgiri Hills) ಆಗಸದಲ್ಲೇ ಮಂಜಿನ ನಡುವೆ ಮರೆಯಾಗುವ ಹೆಲಿಕಾಪ್ಟರ್​ನ ದೃಶ್ಯವನ್ನು ನೀಲಗಿರಿ ಅರಣ್ಯದಲ್ಲಿ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಮಂಜು ಮುಸುಕಿದ್ದರೂ ಹೆಲಿಕಾಪ್ಟರ್ ತುಂಬಾ ಕೆಳ ಮಟ್ಟದಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಇದಾದ ಸೆಕೆಂಡುಗಳ ನಂತರ ಹೆಲಿಕಾಪ್ಟರ್ ಮರಗಳಿಗೆ ಅಪ್ಪಳಿಸಿತು ಎಂದು ಹೇಳಲಾಗುತ್ತಿದೆ.

ಜನರಲ್ ರಾವತ್ ಉಪನ್ಯಾಸ ನೀಡಲು ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುತ್ತಿದ್ದರು. ಅವರ ಪತ್ನಿ ಮಧುಲಿಕಾ ರಾವತ್ (madhulika Rawat) ಸೇರಿದಂತೆ ಸಿಡಿಎಸ್‌ ಸಿಬ್ಬಂದಿ ಜತೆಗಿದ್ದರು. ಹೆಲಿಪ್ಯಾಡ್‌ನಿಂದ ಲ್ಯಾಂಡ್ ಆಗಬೇಕಿದ್ದ ಸುಮಾರು 10 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ.

Video Top Stories