Asianet Suvarna News Asianet Suvarna News

6 ನೇ ಮದುವೆಗೆ ಮುಂದಾದ ಮಾಜಿ ಸಚಿವನಿಗೆ ಶಾಕ್ ಕೊಟ್ಟ ಪೊಲೀಸರು..!

Aug 3, 2021, 8:53 AM IST

ಆಗ್ರಾ (ಆ. 03):  6ನೇ ಮದುವೆಯಾಗಲು ತಯಾರಿ ನಡೆಸಿದ್ದ ಉತ್ತರ ಪ್ರದೇಶದ ಮಾಜಿ ಮಂತ್ರಿ ಚೌಧರಿ ಬಷೀರ್‌ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. 

ಬಷೀರ್‌ನ ಮೂರನೇ ಪತ್ನಿ ನಗ್ಮಾ ನೀಡಿದ ಹಿನ್ನೆಲೆಯಲ್ಲಿ ಆಗ್ರಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2012ರಲ್ಲಿ ಬಷೀರ್‌, ನಗ್ಮಾಳನ್ನು ಮೂರನೇ ಪತ್ನಿಯಾಗಿ ಸ್ವೀಕರಿಸಿದ್ದ. ನಂತರದಲ್ಲಿ ಇನ್ನೂ ಎರಡು ಮದುವೆಯಾಗಿದ್ದ. ಈ ನಡುವೆ ಇತ್ತೀಚೆಗೆ ತ್ರಿವಳಿ ತಲಾಖ್‌ ನೀಡುವ ಮೂಲಕ ನಗ್ಮಾಳನ್ನು ಮನೆಯಿಂದ ಹೊರಹಾಕಿದ್ದ. ಅದರ ಬೆನ್ನಲ್ಲೇ ಆತ 6ನೇ ಮದುವೆಗೆ ಸಿದ್ದತೆ ನಡೆಸಿದ ವಿಷಯ ನಗ್ಮಾ ಕಿವಿಗೆ ಬಿದ್ದು ಆಕೆ ದೂರು ನೀಡಿದ್ದರು.