ಪಂಚರಾಜ್ಯ ಚುನಾವಣೆಗೆ ಇಲ್ವಾ ಮೈತ್ರಿ ಪಾಲಿಟಿಕ್ಸ್..? ಈ ಬಗ್ಗೆ ಸ್ಪಷ್ಟನೆ ನೀಡಿ ಎಂದ ಅಖಿಲೇಶ್ ಯಾದವ್..!
ಲೋಕಸಭಾ ಚುನಾವಣೆಗೂ ಮುನ್ನವೇ ವಿಪಕ್ಷಗಳಲ್ಲಿ ಭಿನ್ನಮತ?
ಚುನಾವಣೆಗೂ ಮುನ್ನವೇ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು?
ಲೋಕಸಭೆ ಚುನಾವಣೆಗೆ ಮಾತ್ರವೇ ವಿಪಕ್ಷಗಳ ಮಧ್ಯೆ ಮೈತ್ರಿಯಾ?
ಲೋಕಸಭಾ ಚುನಾವಣೆಗೂ ಮುನ್ನವೇ ವಿಪಕ್ಷಗಳಲ್ಲಿ ಭಿನ್ನಮತ ಮೂಡಿದೆ. ಹೀಗಾಗಿ ಲೋಕಸಭೆಗೆ(Loksabha) ಮಾತ್ರ ವಿಪಕ್ಷಗಳ ಮೈತ್ರಿನಾ ಎಂಬ ಪ್ರಶ್ನೆ ಸಹ ಇದೀಗ ಮೂಡಿದೆ. ಪಂಚರಾಜ್ಯ ಚುನಾವಣೆಗೆ(Election) ಮೈತ್ರಿ ಇಲ್ವಾ ? ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಅಖಿಲೇಶ್ ಯಾದವ್ ಕೇಳಿದ್ದಾರೆ. ಇಲ್ಲದಿದ್ದರೆ ನಾವು ಯುಪಿಯ ಎಲ್ಲಾ 80 ಸ್ಥಾನದಲ್ಲಿ ಸ್ಪರ್ಧಿಸ್ತೇವೆ. ಮಧ್ಯಪ್ರದೇಶದ(Madhya Pradesh) ಎಲ್ಲಾ 230 ಸ್ಥಾನಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್(Congress) ನಿರ್ಧಾರದ ವಿರುದ್ಧ ಸಮಾಜವಾದಿ ಪಕ್ಷ ಸಿಡಿದೆದ್ದಿದೆ. ಮಧ್ಯಪ್ರದೇಶದಲ್ಲಿ ಮೈತ್ರಿ ನಿರೀಕ್ಷೆಯಲ್ಲಿ ಸಮಾಜವಾದಿ ಪಕ್ಷ ಇತ್ತು. ಕನಿಷ್ಠ 12 ಸ್ಥಾನ ಕಾಂಗ್ರೆಸ್ ನೀಡಬಹುದೆಂದು ಅಖಿಲೇಶ್ ಕಾದಿದ್ದರು. ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಮಧ್ಯಪ್ರದೇಶಕ್ಕೆ 31 ಅಭ್ಯರ್ಥಿಗಳ ಹೆಸರನ್ನು ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ಈ ಬಾರಿ ಕನಿಷ್ಠ 6 ಸ್ಥಾನ ಗೆಲ್ಲೋದಾಗಿ ಅಖಿಲೇಶ್ ಯಾದವ್(Akhilesh yadav) ಭರವಸೆ ಹೊಂದಿದ್ದು, ಮಧ್ಯಪ್ರದೇಶ ಜೊತೆಗೆ ಛತ್ತೀಸ್‌ಗಢ, ತೆಲಂಗಾಣದಲ್ಲೂ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಯುದ್ಧಭೂಮಿಯಲ್ಲಿ ಸುವರ್ಣ ನ್ಯೂಸ್ ಸಂಚಾರ: ಕಣ್ಣೆದುರೇ ರಾಕೆಟ್ ಅಟ್ಯಾಕ್..ಲೈವ್‌ನಲ್ಲೇ ಸೈರನ್ ಸದ್ದು..!