ಬಂಗಾಳದಲ್ಲಿ ದೀದಿ ಜೊತೆ ಓಪನ್ ದಂಗಲ್..! ಐದು ರಾಜ್ಯಗಳು.. ಐದು ಭಿನ್ನ ಸ್ವರ..!
ಸೀಟು ಹಂಚಿಕೆ ಬಗ್ಗೆ ಸರಣಿ ಮೀಟಿಂಗ್..!
ಶಿವಸೇನೆ ಬೇಡಿಕೆಗೆ ಕಾಂಗ್ರೆಸ್ ತಕರಾರು..!
ಏನಾಗಲಿದೆ ಮಹಾಮೈತ್ರಿಯ ಭವಿಷ್ಯ..?
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಭಾರತದ ಗದ್ದುಗೆ ಹಿಡಿಯೋದನ್ನ ತಡೆಯೋಕೆ ಅಂತಲೇ ಕಾಂಗ್ರೆಸ್(Congress) ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದ ರಚನೆ ಆಗಿದೆ. ಲೋಕಸಭಾ ಚುನಾವಣೆ(Loksabha election) ದಿನಗಳು ಹತ್ತಿರವಾಗ್ತಾ ಇರೋ ಹೊತ್ತಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿ ತಾಳ ಮೇಳ ಕೂಡ್ತಾ ಇಲ್ಲ. ಸೀಟು ಹಂಚಿಕೆ ಬಗ್ಗೆ ಸರಣಿ ಸಭೆಗಳು ನಡೀತಾ ಇದ್ರೂ ಫಲಪ್ರದವಾಗ್ತಾ ಇಲ್ಲ. 2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ(Narendra Modi) ಸೋಲಿಸಬೇಕು ಅನ್ನೋ ಏಕಮಾತ್ರ ಉದ್ದೇಶದಿಂದ ಹುಟ್ಟಿಕೊಂಡ ಒಕ್ಕೂಟವೇ I.N.D.I.A. ಅಂದ್ರೆ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ ಕ್ಲೂಸಿವ್ ಅಲಾಯನ್ಸ್. ಈ ಕ್ಲಬ್ಬಿನಲ್ಲಿ ಅತಿರಥ ಮಹಾರಥ ರಾಜಕೀಯ ಪಕ್ಷಗಳಿವೆ, ಮಲ್ಲಿಕಾರ್ಜುನ ಖರ್ಗೆ ಸಾರಥ್ಯದ ಕಾಂಗ್ರೆಸ್ . , ಎಮ್ ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಉದ್ಧವ್ ಠಾಕ್ರೆಯ ಶಿವಸೇನೆ, ನಿತೀಶ್ ಕುಮಾರ್ ಅವರ ಜೆಡಿಯು , ಶರದ್ ಪವಾರ್ ಅವರ ಎನ್ ಸಿ ಪಿ, ಸಮಾಜವಾದ ಪಾರ್ಟಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಹೀಗೆ 20 ಕ್ಕೂ ಅಧಿಕ ಪ್ರಾದೇಶಿಕ ಪಕ್ಷಗಳು ಈ ಸೇನೆಯಲ್ಲಿ ಇದೆ.
ಇದನ್ನೂ ವೀಕ್ಷಿಸಿ: ಟೀನೇಜ್‌ನಲ್ಲೇ 7 ವರ್ಷ ಜೈಲುವಾಸ ಅನುಭವಿಸಿದ್ಲು..! ಹೋಟೆಲ್ ಸಿಸಿ ಕ್ಯಾಮರಾದಲ್ಲಿತ್ತು ಆಕೆ ಕೊಲೆ ರಹಸ್ಯ..!