Asianet Suvarna News Asianet Suvarna News

3 ವರ್ಷದ ಮಗುವಿಗೆ ಕೊರೋನಾ: ಭಾರತದಲ್ಲಿ ಸೋಂಕಿತರ ಸಂಖ್ಯೆ 43ಕ್ಕೆ ಏರಿಕೆ!

ವುಹಾನ್ ನಗರದಿಂದ ಹುಟ್ಟಿಕೊಂಡ ಮಾರಕ ಕೊರೋನಾ ವೈರಸ್ ಗೆ ಚೀನಾದಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಲ್ಲಿಂದ ಸದ್ಯ ವಿಶ್ವದ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿರುವ ಈ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಭಾರತಕ್ಕೂ ಈ ವೈರಸ್ ಲಗ್ಗೆ ಇಟ್ಟಿದ್ದು, ಈವರೆಗೂ 3 ವರ್ಷದ ಮಗು ಸೇರಿ ಒಟ್ಟು 43 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

First Published Mar 9, 2020, 4:38 PM IST | Last Updated Mar 9, 2020, 4:38 PM IST

ನವದೆಹಲಿ[ಮಾ.09]: ವುಹಾನ್ ನಗರದಿಂದ ಹುಟ್ಟಿಕೊಂಡ ಮಾರಕ ಕೊರೋನಾ ವೈರಸ್ ಗೆ ಚೀನಾದಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಲ್ಲಿಂದ ಸದ್ಯ ವಿಶ್ವದ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿರುವ ಈ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಭಾರತಕ್ಕೂ ಈ ವೈರಸ್ ಲಗ್ಗೆ ಇಟ್ಟಿದ್ದು, ಈವರೆಗೂ 3 ವರ್ಷದ ಮಗು ಸೇರಿ ಒಟ್ಟು 43 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

"

ಹೌದು ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 41 ರಿಂದ 43ಕ್ಕೇರಿದೆ. ಕೇರಳದಲ್ಲಿ ಇಟಲಿಯಿಂದ ಬಂದ 3 ವರ್ಷದ ಮಗು ಹಾಗೂ ಜಮ್ಮು ಕಾಶ್ಮೀರಕ್ಕೆ ಬಂದಿದ್ದ ಇರಾನ್ ಮಹಿಳೆಯಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗಿದೆ.

"

ಸರ್ಕಾರ ಈ ವೈರಸ್ ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸುತ್ತಿದ್ದು, ಜನರಲ್ಲಿ ಈ ಸಂಬಂಧ ಜಾಗೃತಿ ಮೂಡಿಸುತ್ತಿದೆ.