3 ಅಚ್ಚರಿ ಸಿಎಂ, ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್‌ ನಡೆ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ತಾನು ಗೆದ್ದ ಮೂರು ರಾಜ್ಯಗಳಿಗೆ ಬಿಜೆಪಿ ಹೊಸ ಮುಖಗಳನ್ನು ಸಿಎಂ ಆಗಿ ಪರಿಚಯಿಸಿದೆ.
 

First Published Dec 13, 2023, 5:13 PM IST | Last Updated Dec 13, 2023, 5:13 PM IST

ಬೆಂಗಳೂರು (ಡಿ.13): ಕಳೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಐದು ರಾಜ್ಯಗಳ ಪೈಕಿ ಮೂರರಲ್ಲಿ ಗೆಲುವು ಕಂಡಿತ್ತು. ಛತ್ತೀಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಗೆಲುವು ಕಂಡಿದ್ದ ಬಿಜೆಪಿ ಈ ರಾಜ್ಯಗಳ ಸಿಎಂ ಆಯ್ಕೆಯಲ್ಲಿ ದೊಡ್ಡ ಮಟ್ಟದ ಲೆಕ್ಕಾಚಾರದ ಆಟವಾಡಿದೆ.

ಈ ಮೂರೂ ರಾಜ್ಯಗಳಲ್ಲಿ ಸಿಎಂ ಹಾಗೂ ಹೊಸ ಮುಖಗಳನ್ನು ಆಯ್ಕೆ ಮಾಡಿದೆ. ಮಧ್ಯಪ್ರದೇಶಕ್ಕೆ ಮೋಹನ್‌ ಯಾದವ್‌, ಛತ್ತೀಸ್‌ಗಢಕ್ಕೆ ವಿಷ್ಣುದೇವ್‌ ಸಾಯಿ ಹಾಗೂ ರಾಜಸ್ಥಾನಕ್ಕೆ ಇದೇ ಮೊದಲ ಬಾರಿ ಶಾಸಕನಾಗಿ ಗೆಲುವು ಕಂಡಿದ್ದ ಭಜನ್‌ ಲಾಲ್‌ ಶರ್ಮ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ.

ಅಧಿವೇಶನದಲ್ಲಿ ಒಗ್ಗಟ್ಟಾಗಬೇಕಿದ್ದ ಬಿಜೆಪಿಯಲ್ಲೇ ತಪ್ಪಿದ ತಾಳ: ಉ.ಕರ್ನಾಟಕಕ್ಕೆ ಸ್ಥಾನ ಸಿಗೋವರೆಗೂ ಸಭೆಗೆ ಹೋಗಲ್ಲ- ಯತ್ನಾಳ್

ಅದರೊಂದಿಗೆ ಎಲ್ಲಾ ರಾಜ್ಯಗಳನ್ನೂ ಉಪಮುಖ್ಯಮಂತ್ರಿಗಳನ್ನೂ ಬಿಜೆಪಿ ನೇಮಿಸಿದೆ. ಜಾತಿ ಲೆಕ್ಕಾಚಾರದ ಆಟವಾಡಿರುವ ಬಿಜೆಪಿ, ಹೊಸ ಮುಖಗಳನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆಗಳಿಗೆ ಅಖಾಡ ಸಿದ್ಧ ಮಾಡಿದೆ.