ಸಪ್ತಸಾಗರದಾಚೆಯೂ ಸರ್ವಾಂತರ್ಯಾಮಿ.. ಮೊಳಗಿದ ರಾಮಘೋಷ..!
ರಾಮನ ಪ್ರಾಣ ಪ್ರತಿಷ್ಠೆಯ ದಿನ ಮುಸ್ಲಿಂ ರಾಷ್ಟ್ರಗಳನ್ನು ರಾಮಘೋಷ ಮೊಳಗಿದೆ. ಜರ್ಮನಿ ಸಿಂಗರ್ ಒಬ್ರು ರಾಮಭಜನೆ ಹಾಡಿ ಗಮನ ಸೆಳೆದಿದ್ದಾರೆ. ಮಾರಿಷಸ್'ನಲ್ಲಂತೂ ಅಲ್ಲಿನ ಸರ್ಕಾರ ಹಿಂದೂಗಳಿಗೆ 2 ಗಂಟೆ ಬ್ರೇಕ್ ಕೊಟ್ಟಿತ್ತು.
ನವದೆಹಲಿ (ಜ.24): ಸರ್ವಾಂತರ್ಯಾಮಿ ಶ್ರೀರಾಮನಿಗೆ ಸಪ್ತಸಾಗರಗಳಾಚೆಯೂ ಜೈಕಾರ ಹಾಕಲಾಗಿದೆ. ಅಮೆರಿಕ.. ಆಸ್ಟ್ರೇಲಿಯಾ.. ಬ್ರಿಟನ್.. ಫ್ರಾನ್ಸ್.. ಇಂಡೋನೇಷ್ಯಾ..! ಜಗತ್ತಿನ 250 ಕಡೆ ಆದಿಪುರುಷನಿಗೆ ಜೈಕಾರ ಕೂಗಲಾಗಿದೆ.ಒಟ್ಟಾರೆ ವಿದೇಶಗಳಲ್ಲೂ ರಾಮನ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ.
ಅಷ್ಟು ಮಾತ್ರವಲ್ಲ ಭಾರತ-ಚೀನಾ ಗಡಿಯಲ್ಲಿಚೀನಾ ಸೈನಿಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ರಾಮಭಕ್ತಿ, ವಿಶ್ವ ಶಕ್ತಿ ಇಷ್ಟಕ್ಕೇ ಮುಗಿಯೋದಿಲ್ಲ.. ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ಮಾರಿಷಸ್, ಇಂಡೋನೇಷ್ಯಾ, ಸೌದಿ ಅರೇಬಿಯಾದಲ್ಲೂ ಸಂಭ್ರಮಿಸಲಾಗಿದೆ.
ಈಗ ಹಳೆಯ ವೈಷಮ್ಯವನ್ನು ಮರೆಯುವ ಸಮಯ ಎಂದ ಇಮಾಮ್ ಉಮರ್ ಅಹ್ಮದ್!
ಅಯೋಧ್ಯೆಯ ಶ್ರೀರಾಮನ ಗತ್ತು ಇಡೀ ವಿಶ್ವಕ್ಕೇ ಗೊತ್ತು. ಅದೇ ಕಾರಣಕ್ಕೆ ರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯಾದ ದಿನ ಇಡೀ ಜಗತ್ತೇ ರಾಮಭಕ್ತಿಯಲ್ಲಿ ಭಾವ ಪರವಶಗೊಂಡಿದೆ. ಮುಸ್ಲಿಂ ರಾಷ್ಟ್ರಗಳು ಕೂಡ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭಮಿಸಿದೆ.