45 ದಿನದಲ್ಲೇ ಬಿತ್ತು ಮಾಜಿ ಶಾಸಕನ ಮಗನ ಹೆಣ.. ಎನ್‌ಕೌಂಟರ್ ದಾಳಿಗೆ ಏನಂತಾರೆ ಯುಪಿ ಜನ?
ವಕೀಲ ಉಮೇಶ್ ಪಾಲ್ ಕೊಲೆ ಆರೋಪಿಗಳಾದ ಅಸಾದ್ ಅಹ್ಮದ್ ಮತ್ತು ಮೊಹಮ್ಮದ್ ಗುಲಾಂ ಎನ್ನುವವರನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ.
ಅಸದ್ ಅಹ್ಮದ್ ಮೂರ್ನಾಲ್ಕು ದಶಕಗಳ ಕಾಲ, ಮಾಫಿಯಾನೇ ಮುಷ್ಟಿಯಲ್ಲಿಟ್ಕೊಂಡಿದ್ದ ಭೂಪ.. ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 5 ಬಾರಿ ಶಾಸಕ ಸ್ಥಾನ ಗಿಟ್ಟಿಸಿಕೊಂಡಿದ್ದ.. ಸಂಸದನಾಗಿಯೂ ಮೆರೆದಿದ್ದ.ವಕೀಲ ಉಮೇಶ್ ಪಾಲ್ ಕೊಲೆ ಆರೋಪಿಗಳಾದ ಅಸಾದ್ ಅಹ್ಮದ್ ಮತ್ತು ಮೊಹಮ್ಮದ್ ಗುಲಾಂ ಎನ್ನುವವರನ್ನು ಉತ್ತರ ಪ್ರದೇಶ ಪೊಲೀಸರು ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಅಸಾದ್ ಅಹ್ಮದ್ ತನ್ನ ತಂದೆ ಹಾಗೂ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನನ್ನು ಕೋರ್ಟ್‌ಗೆ ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.