ಶೃಂಗಸಭೆಯಲ್ಲಿ ಮೋದಿ ಮಾಡಿದ ಮ್ಯಾಜಿಕ್ ಏನು ? ಅಷ್ಟೂ ದೇಶಗಳನ್ನ ಪ್ರಧಾನಿ ಒಗ್ಗೂಡಿಸಿದ್ದು ಹೇಗೆ..?
ಜಿ20 ಗೆ ಆಫ್ರಿಕನ್ ಒಕ್ಕೂಟ ಸೇರ್ಪಡೆ.. ನುಡಿದಂತೆ ನಡೆದ ಮೋದಿ..!
123 ದೇಶಗಳ ಜೊತೆ ಗ್ಲೋಬಲ್ ಸೌಥ್ ವರ್ಚುಯಲ್ ಮೀಟಿಂಗ್..!
ಶೃಂಗಸಭೆ ಅಧಿವೇಷನದಲ್ಲಿ ‘ಸ್ವಸ್ತಿ, ಅಸ್ತು, ವಿಶ್ವಸ್ಯ’ ಮಂತ್ರ..!
ಭಾರತದ ನಾಯಕತ್ವವನ್ನು ಶ್ಲಾಘಿಸಿದ ವಿಶ್ವದ ಮಹಾನಾಯಕರು..!
ಜಿ 20ಯಲ್ಲಿ ಇಂಡೋ-ಗಲ್ಫ್-ಯೂರೋಪ್ ಕಾರಿಡಾರ್‌ಗೆ ಅನುಮೋದನೆ ನೀಡಲಾಗಿದೆ. ಚೀನಾದ ಒನ್ ಬೆಲ್ಟ್ ಒನ್ ರೋಡ್‌ನಿಂದ ಇಟಲಿ ಹೊರಬಂದಿದೆ. ಇನ್ನೂ ಜಿ20 ಒಕ್ಕೂಟಕ್ಕೆ(G20 Summit) ಆಫ್ರಿಕನ್ ರಾಷ್ಟ್ರಗಳ(African countries) ಸೇರ್ಪಡೆಯಾಗಿದೆ. ನರೇಂದ್ರ ಮೋದಿ ಪ್ರಧಾನಿಯಾದ(Narendra Modi) ದಿನದಿಂದಲೂ ಜಿ20 ಒಕ್ಕೂಟಕ್ಕೆ ತಮ್ಮನ್ನು ಸೇರಿಸಬೇಕು ಎಂಬ ಮನವಿ ಇತ್ತು. ಸತತ 9 ವರ್ಷಗಳ ಹೋರಾಟದ ನಂತರ ಕೊನೆಗೂ ಆಫ್ರಿಕನ್ ರಾಷ್ಟ್ರಗಳನ್ನು ಒಕ್ಕೂಟಕ್ಕೆ ಸೇರಿಸಿದ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ. ವಿಶ್ವಸಂಸ್ಥೆಗೆ ಬುದ್ದಿವಾದ ಹೇಳಿ, ಭದ್ರತಾಮಂಡಳಿ ಖಾಯಂ ಸದಸ್ಯತ್ವಕ್ಕೆ ಒತ್ತಡ ತಂದು ಆಫ್ರಿಕನ್ ರಾಷ್ಟ್ರಗಳನ್ನು ಸೇರಿಸಲಾಗಿದೆ. ಆದರೆ ರಷ್ಯಾ (Russia) ಹೆಸರನ್ನೇ ಹೇಳದೆ ಮಿತ್ರತ್ವವನ್ನೂ ಭಾರತ ಕಾಪಾಡಿಕೊಂಡು ಬಂದಿದೆ. ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯ ಸಂದೇಶದೊಂದಿಗೆ ಸರ್ವೇಜನಾಃ ಸುಖಿನೋ ಭವಂತು ಸಂದೇಶ ಸಾರಿದ್ದು, ಈ ಘೋಷಣೆಗೆ ವಿಶ್ವಸಂಸ್ಥೆಯ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಅವಳು ಹಿಂದೂ, ಅವನು ಮುಸ್ಲಿಂ..ಅವರನ್ನ ಒಂದು ಮಾಡಿದ್ದು ನಶೆ: ಆವತ್ತು ಆ ರೂಮಿನಲ್ಲಿ ನಡೆದಿದ್ದೇನು..?