Asianet Suvarna News Asianet Suvarna News

ಅಭಿಮಾನಿ ಮನೆಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ: ಅದ್ಧೂರಿ ಹುಡುಗನ ಸರಳತೆಗೆ ಮಾರು ಹೋದ ಫ್ಯಾನ್ಸ್‌!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದುವರೆಗೂ ಮಾಡಿದ್ದು ನಾಲ್ಕೇ ಸಿನಿಮಾ. ಆದ್ರೆ ಅವರ ಫ್ಯಾನ್ ಬೇಸ್ ಮಾತ್ರ ಬಹಳಾ ದೊಡ್ಡದ್ದು. ಮಾಸ್‌ಗೆ ಬಾಸ್ ರೀತಿ ಬೆಳ್ಳಿತೆರೆಯಲ್ಲಿ ವಿಜೃಂಭಿಸೋ ಧ್ರುವ ಸರ್ಜಾಗೆ ಸಿಕ್ಕಾಪಟ್ಟ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದುವರೆಗೂ ಮಾಡಿದ್ದು ನಾಲ್ಕೇ ಸಿನಿಮಾ. ಆದ್ರೆ ಅವರ ಫ್ಯಾನ್ ಬೇಸ್ ಮಾತ್ರ ಬಹಳಾ ದೊಡ್ಡದ್ದು. ಮಾಸ್‌ಗೆ ಬಾಸ್ ರೀತಿ ಬೆಳ್ಳಿತೆರೆಯಲ್ಲಿ ವಿಜೃಂಭಿಸೋ ಧ್ರುವ ಸರ್ಜಾಗೆ ಸಿಕ್ಕಾಪಟ್ಟ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. ಅದ್ಧೂರಿ ಹುಡುಗ ಹೋದಲ್ಲಿ ಬಂದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಆದ್ರೆ ಈಗ ಫಸ್ಟ್ ದಿ ಫಸ್ಟ್ ಟೈಂ ಧ್ರುವ ಸರ್ಜಾ ತನ್ನ ಅಭಿಮಾನಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮದಲ್ಲಿರೋ ತನ್ನ ಅಭಿಮಾನಿ ದರ್ಶನ ಮಾದಾರ ಮನೆಗೆ ಅದ್ಧೂರಿ ಹುಡುಗ ಧ್ರುವ ಸರ್ಜಾ ವಿಸೀಟ್ ಮಾಡಿದ್ದಾರೆ. 

ದರ್ಶನ‌ ಮಾದರ ಎನ್ನುವ ಯುವಕ ದೃವ ಸರ್ಜಾ ಅವರ ಕಟ್ಟಾಭಿಮಾನಿ. ಇಳಕಲ್ ನಗರದಲ್ಲಿ ಧ್ರುವ ಸರ್ಜಾ ಹೆಸರಿನಲ್ಲೆ ದರ್ಶನ ಜಿಮ್ ತೆರೆದಿದ್ದಾರೆ. ಹೀಗಾಗಿ ಈ ಅಭಿಮಾನ ಕಂಡು ಧ್ರುವ ತನ್ನ ಪುಟ್ಟ ಅಭಿಮಾನಿ ಮನೆಗೆ ಭೇಟಿ ಕೊಟ್ಟು ಸರ್ಪ್ರೈಸ್ ಕೊಟ್ಟಿದ್ದಾರೆ. ಧ್ರುವ ಸರ್ಜಾ ಆ ಪುಟ್ಟ ಗ್ರಾಮಕ್ಕೆ ಬಂದ ವಿಷಯ ತಿಳಿದು ಅಕ್ಕ ಪಕ್ಕ ಹಳ್ಳಿಯ ಹುಡುಗರೆಲ್ಲಾ ಬಂದು ಧ್ರುವ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆಕ್ಷನ್ ಪ್ರಿನ್ಸ್ ತನ್ನ ಫ್ಯಾನ್ಸ್ಅನ್ನ ವಿಐಪಿ ಎಂದು ಕರೆಯುತ್ತಾರೆ. ತನ್ನ ಮನೆ ಬಳಿ ಯಾವ ಅಭಿಮಾನಿ ಬಂದ್ರು ಭೇಟಿ ಮಾಡುತ್ತಾರೆ ಈ ಕೆಡಿ. ಅಭಿಮಾನಿಗಳನ್ನ ಮನೆ ಸದಸ್ಯರಂತೆ ಕಾಣೋ ಧ್ರುವನ ಅಭಿಮಾನದ ಯಾತ್ರೆ ಹೀಗೆ ಮುಂದುವರೆಯಲಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment