Asianet Suvarna News Asianet Suvarna News

‘ಕೋಟಿಗೊಬ್ಬ 3’ ವಿಳಂಬ: ನಿರ್ಮಾಪಕರು- ವಿತರಕರ ನಡುವಿನ ಗುದ್ದಾಟಕ್ಕೆ ಕಾರಣವೇನು.?

Oct 17, 2021, 2:24 PM IST

ಬೆಂಗಳೂರು (ಅ. 17): ಅ.14 ರಂದು ತೆರೆಕಾಣಬೇಕಾಗಿದ್ದ ‘ಕೋಟಿಗೊಬ್ಬ-3’  (Kotigobba 3) ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವಂತೆ ಮಾಡಿದ್ದರಲ್ಲಿ ಕೆಲವು ವಿತರಕರ ಪಾತ್ರವಿದೆ. ಅವರ ಈ ಕೃತ್ಯ ನಿರ್ಮಾಪಕನಿಗೆ ಮಾಡಿರುವ ನಂಬಿಕೆ ದ್ರೋಹ’ ಎಂದು ಖ್ಯಾತ ನಟ ಸುದೀಪ್‌ (Sudeep) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಿವಾರ್ಯ ಕಾರಣಗಳು ಅಂದವರು ಈಗ ಮಾಧ್ಯಮಗಳಲ್ಲಿ ಷಡ್ಯಂತ್ರ ಅಂತಿದ್ದಾರೆ: ನಿರ್ಮಾಪಕ ಶ್ರೀಕಾಂತ್

‘ಕೋಟಿಗೊಬ್ಬ 3’ ಚಿತ್ರ ಬಿಡುಗಡೆಗೆ ತೊಂದರೆ ಕೊಟ್ಟವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಒಂದು ದಿನ ತಡವಾಗಿದ್ದಕ್ಕೆ 8 ರಿಂದ 10 ಕೋಟಿ ನಷ್ಟಆಗಿದೆ. ಈ ಬಗ್ಗೆ ಸಾಕ್ಷಿ ಸಮೇತ ದೂರು ದಾಖಲಿಸುತ್ತೇನೆ. ನನಗೆ ಮತ್ತು ನಮ್ಮ ಚಿತ್ರದ ನಾಯಕ ಸುದೀಪ್‌ ಅವರಿಗೆ ಅಪಖ್ಯಾತಿ ತರುವ ಸಂಚು ಇದಾಗಿದ್ದು, ಮಾನನಷ್ಟಮೊಕದೊಮ್ಮೆ ಕೂಡ ಹೂಡುತ್ತೇನೆ' ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಇಡೀ ವಿವಾದದ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮಾತನಾಡಿದ್ದಾರೆ.